ಮದುವೆ ಮಾಡ್ಕೊ ತಮಾಶೆ ನೋಡ್ಕೊ!
ಸಾಮಾನ್ಯವಾಗಿ ಮದವೆಮನೆಗಳಲ್ಲಿ ಆರ್ಚಕರ ಮಂತ್ರಗಳು ಒಂದೆಡೆಯಾದರೆ, ನಮ್ಮ ಬಳಗಗಳ ಕವ-ಕವ ಇನ್ನೊಂದೆಡೆ. ವಧೂವರರು ಯಾವೆಡೆ ಗಮನಕೊಡಬೇಕು ಪಾಪ! ಮೊದಲೇ ನಮ್ಮಕಡೆಯ ಬಹುಪಾಲು ಮದುವೆಗಳು arranged marriageಗಳು. ಇದರಿಂದ ಇಬ್ಬರ ಅಪ್ಪ ಅಮ್ಮಂದಿರ, ಇತರ ಸಂಬಂಧಿಗಳ ಸಲಹೆಗಳನ್ನೂ ಕೇಳಿಸಿಕೊಳ್ಳುತ್ತಿರಬೇಕು. ಇಷ್ಟೆಲ್ಲವೂ ಅಗ್ನಿದೇವನ ಧಗೆಯ ಮುಂದು ಕೂತೇ ಆಗಬೇಕು!
ನಮ್ಮದು Arranged marriage ಅಲ್ಲದಿದ್ದರೂ ಒಂದು ಥರಾ “self-arranged” marriageಉ (ಅದೇ ಮತ್ತೊಂದು ದೊಡ್ಡ ಕಥೆ). ನಮ್ಮ ಮದುವೆಯಲ್ಲಿ ನಡೆದ ಕೆಲವು "ಹಾಸ್ಯಕರ" ಪ್ರಸಂಗಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
ರಾಹುಕಾಲದ ತಾಪತ್ರೆಯ:
ಬಂಧುಗಳಿಂದ ಆಶೀರ್ವಾದಗಳನ್ನೂ, ಸಲಹೆಗಳನ್ನೂ ಪಡೆದನಂತರ, "ನಾಗವಲ್ಲೀ" ಎಂಬ ಶಾಸ್ತ್ರ ಶುರುವಾಗುವ ಸಮಯ ಬಂದಿತ್ತು (ಈ ಶಾಸ್ತ್ರ ಎಲ್ಲಾ ಸಾಂಪ್ರದಾಯಿಕ ಮುದುವೆಗಳಲ್ಲಿ ಇದೆಯೊ ಇಲ್ಲವೊ ನಾನಂತೂ ಕಾಣೆ).
ಸರಿ, ಸುಮಾರು ಮೂರು ಘಂಟೆಯ ಹೊತ್ತಿಗೆ ನಾಗವಲ್ಲಿ ಶಾಸ್ತ್ರ ಶುರುವಾಯಿತು (ಈ ಶಾಸ್ತ್ರದ ಅಗತ್ಯವೇನೆಂದು ನನಗೆ ಇಂದಿಗೂ ಅರ್ಥವಾಗಿಲ್ಲ),
ನಮ್ಮ ತಾಪತ್ರೆಯ ಇಲ್ಲಿಗೇ ಮುಗಿಯಲಿಲ್ಲ. ಊಟಮಾಡುತ್ತಿದ್ದಾಗ ಅರ್ಚಕರು ನಮಗೆ ಬೇಗಬೇಗನೆ ಊಟ ಮುಗಿಸಲು ಹೇಳಿದರು (ವಧುವರರು ಪ್ರಶ್ನೆಗಳು ಕೇಳೋಹಾಗಿಲ್ಲ, protestಗೆ ಕಾಲವೇ ಇಲ್ಲ) . ನಮ್ಮ ಮದುವೆಯಲ್ಲಿ ನಮಗೇ ಊಟಮಾಡಲು ಸಿಗುವಂತೆ ಕಾಣಲಿಲ್ಲ. ಇದ್ಯಾಕೆಂದು ಗಬಗಬ ತಿಂದು ಮುಗಿಸಿದ ಮೇಲೇನೇ ತಿಳಿದಿದ್ದು ನಮ್ಮಿಬ್ಬರಿಗೆ.
ಅದೇನೊ ಆರುಂಧತಿ ನಕ್ಷತ್ರವನ್ನು ತೋರಿಸುವ ಶಾಸ್ತ್ರವಂತೆ. ಇದು ಯಾವ ಗ್ರಹಚಾರನೊ ಕಾಣೆ! ಮಟಮಟ ಮಧ್ಯಾಹ್ನದಲ್ಲಿ ಕತ್ತೆತ್ತಿ ನೋಡಿದಾಗ ಆಕಾಶದಲ್ಲಿ ನಕ್ಷತ್ರ ಕಾಣಿಸುವುದು ಮದುವೆಯಾಗುವ ವಧೂವರಿರಿಗ ಮಾತ್ರ! ಸೃಷ್ಟಿಕರ್ತ ಬ್ರಹ್ಮನಿಗೂ ಅದು ಸಾಧ್ಯವಿಲ್ಲ. ಇಂಥ ಮಹಾಕಾರ್ಯವನ್ನು “ಮಾಡಿ” ಮುಗಿಸಿಯೂ ಆಯಿತು, ಆದರೆ ಆರುಂಧತಿ ಮಾತ್ರ ನಮ್ಮ ಕಣ್ಣಿಗೆ ಬೀಳಲಿಲ್ಲ. ಅವಳ ತಪ್ಪಲ್ಲ!
ನಮ್ಮದು Arranged marriage ಅಲ್ಲದಿದ್ದರೂ ಒಂದು ಥರಾ “self-arranged” marriageಉ (ಅದೇ ಮತ್ತೊಂದು ದೊಡ್ಡ ಕಥೆ). ನಮ್ಮ ಮದುವೆಯಲ್ಲಿ ನಡೆದ ಕೆಲವು "ಹಾಸ್ಯಕರ" ಪ್ರಸಂಗಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
ಊಟ ಹಾಗು ಆಶೀರ್ವಾದಗಳು:
ಧಾರೆ ಮುಗಿದ ಮೇಲೆ ನನ್ನನ್ನೂ ಕಿರಣನನ್ನು exhibition pieceಗಳಂತೆ ಒಂದು ಕಡೆ ಕೂರಿಸಿ ಒಬ್ಬೊಬ್ಬರಾಗಿ ತಮ್ಮ ತಮ್ಮ “ಆಶೀರ್ವಾದಗಳನ್ನೂ”, ಸಲಹೆಗಳನ್ನೂ ಕೊಡಲು ಆರಂಭಿಸಿದರು. ಇದಕ್ಕೆಂದೇ ಒಂದು queue ಬೇರೆ ನಿಂತಿತ್ತು! ಈ ಶುಭಾಷಯಗಳ ನಡುವೆ ನಮ್ಮಿಬ್ಬರ ಸೊರಗಿಹೋಗಿದ್ದ ಮುಖಗಳನ್ನು ನೋಡಿದ ಒಬ್ಬ ಅಡಿಗೆಯವರು ಎರಡು ಲೋಟ ನಿಂಬೇಪಾನಕವನ್ನು ದಯಮಾಡಿಸಿದರು. Queue ನಲ್ಲಿ ನಿಂತಿದ್ದವರು ಅದನ್ನೂ ನೆಮ್ಮದಿಯಿಂದ ಕುಡಿಯಲು ಬಿಡಲಿಲ್ಲ. ಪಾಪ ಅವರನ್ನು ಏಕೆ ಬಯ್ಯಬೇಕು ಬಿಡಿ, dining roomಇಂದ ಊಟದ ಬುಲಾವ್ ಬರುತ್ತಿತ್ತು. ಊಟಕ್ಕೂ queue. ನನ್ನ ಮದುವೆಯಲ್ಲಿ ಸುಮಾರು ಸಾವಿರ ಜನರು ಊಟ ಮಾಡಿದ್ದರಂತೆ. ನನ್ನ ಮತ್ತು ಕಿರಣನ ಬಳಗದವರೂ, ಸ್ನೇಹಿತರೂ ಎಲ್ಲಾ ಸೇರಿ ಒಂದು ಸಾವಿರ ಜನರಿರುವರಂದು ಆಗಲೇ ಗೊತ್ತಾದ್ದುದ್ದು.

ರಾಹುಕಾಲದ ತಾಪತ್ರೆಯ:
ಅಷ್ಟರ ಹೊತ್ತಿಗೆ ಸುಮಾರು ೧:೩೦ ಮಧ್ಯಾಹ್ನ. ಯಾರಿಗೂ ನನ್ನ, ಕಿರಣನ ಊಟದ ಚಿಂತೆಯೇ ಇದ್ದಂತೆ ಕಂಡುಬರಲಿಲ್ಲ. ಇಬ್ಬರಿಗೂ ಬೆಳಿಗ್ಗೆಯಿಂದ ಉಪವಾಸ ಮಾಡಿ ಹೊಟ್ಟೆಯಲ್ಲಿ ಚಂಡೆ ಮದ್ದಳೆ ತಾಳ ಹಾಕುತ್ತಿತ್ತು. ನಾನು ಮತ್ತು ನನ್ನ ಹತ್ತಿರದ ಬಳಗಗಳೂ ಹಾಗು ಕಿರಣ ಮತ್ತು ಅವನ ಹತ್ತಿರದ ಬಳಗಗಳೂ ಬಿಟ್ಟರೆ, ಮಿಕ್ಕಿದ್ದವರಿಗೆಲ್ಲಾ ಚೆನ್ನಾಗಿ ಉಂಡ ತೃಪ್ತಿ. ಮದುವೆ ನಮಗೆ, ಊಟ ಬೇರೆಯವರಿಗೆ ಎಂಬಂತಾಗಿತ್ತು. ಇದು ಯಾವ ಸೀಮೆ ನ್ಯಾಯಾನೋ? “ಕಷ್ಟ”ಪಟ್ಟು ಮದುವೆ ಆಗುತ್ತಿರುವುದು ನಾವು! ಊಟ ತುಂಬಾ ಚೆನ್ನಾಗಿತ್ತು, ಕೋಸಂಬರಿ ಭರ್ಜರಿಯಾಗಿತ್ತು, ಪೇಣಿ ಅಮೋಘವಾಗಿತ್ತು ಎಂದು ಹಾಳುಹೊಟ್ಟೆ ಬಿಟ್ಟುಕೊಂಡು ಕೇಳಬೇಕಾಗಿದ್ದೂ ನಾವೇ!
ಈ ಸಂಕಟದ ನಡುವೆಯಲ್ಲಿ ಅರ್ಚಕರು ತಮ್ಮದೇ ಆದ ಒಂದು bomb ಹಾಕಿದರು "ಈಗ ರಾಹುಕಾಲ, ಮುಂದಿನ ಒಂದೂವರೆ ಘಂಟೆ ಕಾಲ ಯಾವ ಶಾಸ್ತ್ರಾನೂ ನಡಿಯೋಹಾಗಿಲ್ಲ".
ಆಹಾ, ಎಂಥಹ ಭಾಗ್ಯವಂತರು ನಾವು! ಈ bombಅನ್ನು ಕೇಳಿ ಇಬ್ಬರ ಕಿವಿಯೂ ಪಾವನವಾದವು ಅಂದು.
ಆಹಾ, ಎಂಥಹ ಭಾಗ್ಯವಂತರು ನಾವು! ಈ bombಅನ್ನು ಕೇಳಿ ಇಬ್ಬರ ಕಿವಿಯೂ ಪಾವನವಾದವು ಅಂದು.
ಸರಿ, ಸುಮಾರು ಮೂರು ಘಂಟೆಯ ಹೊತ್ತಿಗೆ ನಾಗವಲ್ಲಿ ಶಾಸ್ತ್ರ ಶುರುವಾಯಿತು (ಈ ಶಾಸ್ತ್ರದ ಅಗತ್ಯವೇನೆಂದು ನನಗೆ ಇಂದಿಗೂ ಅರ್ಥವಾಗಿಲ್ಲ),

“ಎನ್ನರಸ, ಚೆನ್ನರಸ” ಎಂದು ನಾನು ಹೇಳಿದ್ದೂ ಹೇಳಿದ್ದೆ. ಕಿರಣ “ಎನ್ನರಸಿ ಚೆನ್ನರಸಿ” ಎಂದದ್ದೂ ಮುಗಿಯಿತು, ಕೊನೆಗೂ ಊಟದ ಸಮಯ ಬಂದಿತು. ಇದಕ್ಕೆ ಯಾವ ವಿಘ್ನವೂ, ರಾಹುಕಾಲವೂ ಇಲ್ಲ, ನಮ್ಮ ಪುಣ್ಯ!

ನಮ್ಮ ತಾಪತ್ರೆಯ ಇಲ್ಲಿಗೇ ಮುಗಿಯಲಿಲ್ಲ. ಊಟಮಾಡುತ್ತಿದ್ದಾಗ ಅರ್ಚಕರು ನಮಗೆ ಬೇಗಬೇಗನೆ ಊಟ ಮುಗಿಸಲು ಹೇಳಿದರು (ವಧುವರರು ಪ್ರಶ್ನೆಗಳು ಕೇಳೋಹಾಗಿಲ್ಲ, protestಗೆ ಕಾಲವೇ ಇಲ್ಲ) . ನಮ್ಮ ಮದುವೆಯಲ್ಲಿ ನಮಗೇ ಊಟಮಾಡಲು ಸಿಗುವಂತೆ ಕಾಣಲಿಲ್ಲ. ಇದ್ಯಾಕೆಂದು ಗಬಗಬ ತಿಂದು ಮುಗಿಸಿದ ಮೇಲೇನೇ ತಿಳಿದಿದ್ದು ನಮ್ಮಿಬ್ಬರಿಗೆ.

ಅದೇನೊ ಆರುಂಧತಿ ನಕ್ಷತ್ರವನ್ನು ತೋರಿಸುವ ಶಾಸ್ತ್ರವಂತೆ. ಇದು ಯಾವ ಗ್ರಹಚಾರನೊ ಕಾಣೆ! ಮಟಮಟ ಮಧ್ಯಾಹ್ನದಲ್ಲಿ ಕತ್ತೆತ್ತಿ ನೋಡಿದಾಗ ಆಕಾಶದಲ್ಲಿ ನಕ್ಷತ್ರ ಕಾಣಿಸುವುದು ಮದುವೆಯಾಗುವ ವಧೂವರಿರಿಗ ಮಾತ್ರ! ಸೃಷ್ಟಿಕರ್ತ ಬ್ರಹ್ಮನಿಗೂ ಅದು ಸಾಧ್ಯವಿಲ್ಲ. ಇಂಥ ಮಹಾಕಾರ್ಯವನ್ನು “ಮಾಡಿ” ಮುಗಿಸಿಯೂ ಆಯಿತು, ಆದರೆ ಆರುಂಧತಿ ಮಾತ್ರ ನಮ್ಮ ಕಣ್ಣಿಗೆ ಬೀಳಲಿಲ್ಲ. ಅವಳ ತಪ್ಪಲ್ಲ!

ಇವೆಲ್ಲವೂ ನಡೆದ ಸಮಯದಲ್ಲಿ ಮೈಪರಿಚಿಕೊಳ್ಳುವಂತಾಗಿದ್ದರೂ, ಇಂದು ಈ ಘಟನೆಗಳನ್ನು ಜ್ಞಾಪಿಸಿಕೊಂಡಾಗ ನಗು ಉಕ್ಕಿ ಬರುವುದು ಖಚಿತ.
:)
ಮದುವೆ ಸಮಾರ೦ಭದಲ್ಲಿ ಹಾಸ್ಯ - ಉತ್ತಮ ನಿರೂಪಣೆ ಭಾವನಾ ಅವರೆ. ನಾಗೋಲಿ ಶಾಸ್ತ್ರ ಹಳೆ ಮೈಸೂರು(ಕರ್ನಾಟಕದ ದಕ್ಷಿಣ ಭಾಗ) ವಿಭಾಗದಲ್ಲಿ ಪದ್ಧತಿ ಚಾಲ್ತಿಯಲ್ಲಿದೆ.. ಮತ್ತೆ.. " ಎನ್ನರಸ, ಚಿನ್ನರಸಿ " ಸ೦ಭಾಷಣೆ ನೋಡಲು(ಕೇಳಲು) ಉಳಿದವರಿಗೆ ಚಾನ್ಸ್ ಅವಾಗ ತಾನೆ ಸಿಗೋದು..! ಮದುವೆಯ ಚಿತ್ರಗಳನ್ನೂ ತೋರಿಸಿ ಮನ ಮ್ದುದಗೊಳಿಸಿದ್ದೀರಿ. ಧನ್ಯವಾದಗಳು.
ReplyDeleteಅನ೦ತ್
ಭಾವನಾತ್ಮಕ ರಂಜನಾತ್ಮಕ ಮತ್ತು ನಿಮ್ಮದೇ ಅನುಭವ,,.ಚನ್ನಾಗಿದೆ,
ReplyDeleteಚನ್ನಾಗಿದೆ
ReplyDeleteಎಲ್ಲರಿಗೂ ಧನ್ಯವಾದಗಳು..
ReplyDelete:o)
ಕಿರಣ್ ಬಲು ಚೆನ್ನಾಗಿದ್ದಾರೆ ಕಣ್ರೀ. ಹಲೋ ನೀವೂನೂ! ಅಂತೂ ನೀವಿಬ್ಬರೇ ಭೂ ಪಂಕ್ತಿಗೆ ಕೂತರೆ ನಮ್ಮನ್ನು ಊಟಕ್ಕೆ ಕರೆಯುವವರ್ಯಾರು?
ReplyDelete:) dhanyavAdagaLu Badrinath :)
ReplyDeleteMy wife read out your post and it was like a running commentary of any south Indian marriage.Even though you underwent harrowing time, We thoroughly enjoyed the post!!!!
ReplyDeleteThanks :)
ReplyDeleteಮದುವೆಗೆ ಬಂದು ಉಪಹಾರ ಆಶೀರ್ವಾದ ಮಾಡಲು ಮತ್ತು ಊಟಕ್ಕೆ ಕ್ಯೂ ನಲ್ಲಿ ನಿಲ್ಲುವವರ ಕಷ್ಟ ನಿಮಗೆ ಗೊತ್ತೇನ್ರೀ...
ReplyDeleteಚೆನ್ನಾಗಿದೆ ನಿಮ್ಮ ಪ್ರಸಂಗ.
ನಮ್ಮ ಮದುವೆಲ್ಲಿ ಇನ್ನೂ ಭಟ್ಟರ ಕ್ರಮ ಮುಗಿದೇ ಇದ್ದು ಊಟಕ್ಕೆ ಎಲೆ ಹಾಕಿದ್ದಕ್ಕೆ ಎಲ್ಲರು ಅಲ್ಲಿ ಹೋಗಿದ್ರು. ನಾನು ನನ್ನ ಹೆಂಡತಿ ಮತ್ತು ಭಟ್ಟರು ಮೂವರೇ ಹೋಮದ ಹೊಗೆಲ್ಲಿ ಇದ್ದೆವು. ಫೋತೊಗ್ರಾಫಾರು ಇರ್ಲಿಲ್ಲರೀ...
ಮೋಜಿನ ಪ್ರಸಂಗ ಅಲ್ಲವೆ...
ಹ ಹ ಹ ,ಸೀತಾರಾಮ್ ಅವರೇನಿಮ್ಮ ಮದುವೆಯ ಪ್ರಸಂಗ ಬಹಳ ಮಜವಾಗಿದೆ ಬಿಡಿ :)
ReplyDeletenimma maduve prasanga chalodaagide.
ReplyDeletenanna maduveli naDedaddu ishTu..nannoDane ee maduve ishTave endu namma gurugaLu keLidaru...anantara nanna maDadiya (vadhu) thandeyoDane,nimma magaLannu ee(nanna hesaru helidaru)huDuganige koDalu ishTave endu keLidaru....ibbara oppigeya nantara ellaroo ootakke kuLitevu....ooTa mugidu swalpa samaya kaLedu bandavarella horatu hodaru...idella ondereDu gantegaLalli mugiyitu..
aa raathri nanna maDadiya baLi uLidu marudina nanna manege bandevu..adara marudina ondu party..aa nanthara maduve kaarya mugiyitu...eega nanna maduveyaagi 30 varsha gaLaayitu..
eegaloo nammalli maduveyaaguva reeti heegeye.
Q.