ಗುಡು ಗುಡಿಯ ಸೇದಿ ನೋಡು

ಪಾಶ್ಚಿಮಾತ್ಯ ದೇಶಗಳಲ್ಲಿ ಯಾರಾದರು ತಮ್ಮನ್ನು ಸಸ್ಯಹಾರಿಗಳೆಂದುಕೊಂಡರೆ, ಅವರು ಹಾಲು ಹಾಗು ಮೊಸರನ್ನು ಮುಟ್ಟುವುದಿಲ್ಲ. ಅವರ ಅಡಿಗೆಗಳಲ್ಲಿ ಸೋಯಾದಂತಹ ಪದಾರ್ಥಗಳನ್ನು ಬಹಳ ಬಳಸುತ್ತಾರೆ ಹಾಗೂ ತಮ್ಮನ್ನು vegetarians” ಬದಲಾಗಿ “vegans” ಎಂದು ಕರೆದುಕೊಳ್ಳಲು ಇಚ್ಚಿಸುತ್ತರೆ.
ಇಂಥಹ ಜನಗಳ ಪೈಕಿ ಮುಕ್ಕಾಲು ಭಾಗದ ಜನರು “Buddhists”ಗಳು ಇನ್ನು ಕೆಲವರು ಹರೇ ರಾಮ ಹರೇ ಕೃಷ್ಣ ISKCON ಗುಂಪಿನಲ್ಲಿ voluntary” ಕೆಲಸಗಳನ್ನು ಮಾಡುವವರು (ಹೌದು! ಇಲ್ಲೂ ISKCON ಗುಂಪುಗಳಿವೆ).
ಕೆಲವೊಮ್ಮೆ Czech Republic ಬೀದಿ ಬೀದಿಗಳಲ್ಲಿ ಹರೇ ರಾಮ ಹರೇ ಕೃಷ್ಣ ಗುಂಪಿನವರನ್ನು ಕಂಡಿದ್ದೇವೆ. ಈ ಗುಂಪುಗಳು ಭಜನೆಗಳನ್ನು ಹಾಡುತ್ತಿರುತ್ತಾರೆ ಮತ್ತು ಈ ಗುಂಪಿನಲ್ಲಿ ಹಾಡುವವರು ಭಾರತೀಯರೇನಲ್ಲ ಆದ್ರೆ ಇಲ್ಲಿನ ಜನರೇ.











ಈ ಪೈಕಿಯ ಜನರು, “tea house” ಎಂಬ ಜಾಗಗಳಲ್ಲಿ ತಮ್ಮ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುತ್ತಾರೆ. ಈ “tea house”ಗಳಲ್ಲಿ “chai”ಗಳು ದೊರೆಯುತ್ತವೆ. ಆದ್ರೆ ಇಲ್ಲಿನ “chai” ನಮ್ಮ ದೇಶದ “chai” ಯಂತಲ್ಲ.
ಪಾಶ್ಚಿಮಾತ್ಯ ದೇಶಗಳಲ್ಲಿ “chai” ಎಂದರೆ ಒಂದು ಕಪ್ ಬಿಸಿನೀರಿಗೆ, ಕೈಗೆ ಸಿಕ್ಕ ಗಿಡಮೂಲಿಕೆಗಳನೆಲ್ಲಾ ಹಾಕಿ ಕುದಿಸಿ ಕುಡಿಯುವುದೆಂದು. ಇದು ಅವರಿಗೆ “chai”. ನಮ್ಮಲ್ಲಿ ಮಾಡೊ ಮಸಲಾ chai ಇಲ್ಲಿ ಸಿಗೋದು ಬಹಳ ಅಪರೂಪ.
ಇಂಥಹ “tea house”ಗಳಲ್ಲಿ, ಗುಡುಗುಡಿಯನ್ನೂ ಸೇದುತ್ತಾರೆ. ಈ ಗುಡುಗುಡಿಯಲ್ಲಿ ಭಂಗಿಯನ್ನು ಉಪಯೋಗಿಸುವುದಿಲ್ಲ ಏಕೆಂದರೆ ಇಲ್ಲಿ ಇದು “banned”, ಇದರ ಬದಲಾಗಿ ಕೊಂಚ ತಂಬಾಕು ಹಾಗು ಇತರ ಗಿಡಮೂಲಿಕೆಗಳನ್ನು ಉಪಯೋಗಿಸುತ್ತಾರೆ. ನಾನು ಗುಡುಗುಡಿಯನ್ನು ಸೇದದಿದ್ದರೂ ನನ್ನ ಕೆಲವರು ಸ್ನೇಹಿತರಿಗಾಗಿ ಇಂಥಹ ಜಾಗಗಳಿಗೆ ಬರುತ್ತೇನೆ. ಈ ನನ್ನ ಸ್ನೇಹಿತರು Buddhists”ಗಳೂ ಅಲ್ಲ, ಹರೇ ರಾಮ ಹರೇ ಕೃಷ್ಣದಂಥಹ ಗುಂಪುಗಳಲ್ಲಿ voluntary” ಕೆಲಸಗಳನ್ನೂ ಮಾಡುವವರಲ್ಲಾ. ಇವರಿಗೆ ಇಂಥಹ ಜಾಗಗಳು ಒಂದುರೀತಿ exotic”, ಇದಕ್ಕಾಗಿ ಇಂಥಹ ಜಾಗಗಳಿಗೆ ಬರುತ್ತಾರೆ.

“tea house” ಗಳಲ್ಲಿ ಭಾರತೀಯ ಅಗರಬತ್ತಿಯ ಸುವಾಸನೆ ಎಲ್ಲೆಡೆ ಹರಡಿರುತ್ತದೆ. ಈ ಸುವಾಸನೆ ಭರಿತ ಜಾಗದಲ್ಲಿ ಕಾಲಕಳೆದಾಗಲೆಲ್ಲಾ ನನಗೆ ಮನಸ್ಸಿಗೆ ಒಂದು ರೀತಿಯ ನೆಮ್ಮದಿ. ಇದು ಅಗರಬತ್ತಿಯ ಸುವಾಸನೆಗೋ, ನನ್ನ ಮಿತ್ರರೊಂದಿಗೆ ಸಮಯ ಕಳೆದ ಕಾರಣಕ್ಕೊ, ಅಥವ ಇಲ್ಲಿ ಸಿಗೋ ಗಿಡಮೂಲಿಕೆಯ chai ಕುಡಿಯುವುದಕ್ಕೋ ನಾನರಿಯೆ. ಆದರೆ ಒಂದು ರೀತಿಯ ಮನಶಾಂತಿ ಸಿಗುತ್ತೆದೆ...


ಇಂಥಹ ಸಮಯದಲ್ಲಿ ನನಗೆ ಶಿಶುನಾಳ ಶರೀಫರ ಒಂದು ಭಕ್ತಿಗೇತೆ ಜ್ಞಾಪಕಕ್ಕೆ ಬರುತ್ತದೆ...


ಗುಡುಗುಡಿಯ ಸೇದಿ ನೋಡು ||
ಒಡಲೊಳಗಿನಾ ರೋಗ ತೆಗೆದು ಇಡ್ಯಾಡೊ.
ಗುಡುಗುಡಿಯ ಸೇದಿ ನೋಡು ||
ಮನಸೆಂಬ ಸಂಚಿಯ ಬಿಚ್ಚಿ,
ದಿನ ದಿನವೂ ಮೋಹವೆಂಬ ಭಂಗಿಯ ಕೊಚ್ಚಿ,
ನನಹೆಂಬ ಚಿಲುಮೆಯ ಹಚ್ಚಿ
ಬುದ್ಧಿ ಎನುವಂಥ ಕೆಂಡವ ಮೇಲೆ ನೀ ಮುಚ್ಚಿ,
ಗುಡುಗುಡಿಯ ಸೇದಿ ನೋಡು ||
ಬುರುಡಿ ಎಂಬೋದು ಶರೀರ,
ಅದ ಮರೆತು, ಸುಕೃತಕಿಟ್ಟು ಕೊಳವಿಯಾಕಾರ,
ವರ ಶಿಶುನಾಳನೆಂಬೊ ನೀರ
ತುಂಬಿ ಅರಿವೆಂಬ ಅರುವಿಯ ಹೊಚ್ಚೊ ಮೋಜುಗಾರ.
ಗುಡುಗುಡಿಯ ಸೇದಿ ನೋಡು ||

-ಶಿಶುನಾಳ ಶರೀಫ

Comments

  1. ತುಂಬಾ ಚೆನ್ನಾಗಿದೆ.

    ReplyDelete
  2. ಜನ-ಜೀವನದ ವೈಖರಿಯನ್ನು ಪರಿಚಯಿಸುತ್ತ..ಅಧ್ಯಾತ್ಮದ ಒಲವನ್ನೂ ಬಿ೦ಬಿಸಿದ್ದೀರಿ..! ಧನ್ಯವಾದಗಳು ಭಾವನಾ.


    ಅನ೦ತ್

    ReplyDelete
  3. ಚಾಯ್ ಜೊತೆಗೆ ಗುಡಗುಡಿ, ಶಿಶುನಾಳ ಶರೀಫರ ಪದ್ಯದ ಸಾ೦ಗತ್ಯ ಬೇರೆ, ಚೆನ್ನಾಗಿದೆ

    ReplyDelete
  4. ಎಲ್ಲರಿಗು ನನ್ನ ಧನ್ಯವಾದಗಳು... :)

    ReplyDelete
  5. illi bardirodu poorthi haada ?

    ReplyDelete
  6. @ ಕಾರ್ತಿಕ್ , ಇಲ್ಲ ಕಣೋ, ಪೂರ್ತಿ ಅಲ್ಲ..

    ReplyDelete
  7. chennagide nimma article... kavanada saalugaLu saha chennagide

    ReplyDelete
  8. hosa prapancha! tumba interesting aagi ithu :) deepavaliya shubashayagalu Bhavana!

    ReplyDelete
  9. @ Manasu and Moonbeam, DhanyavAdagaLu, nimagu deepavaiya shubhashayagaLu.. :))

    ReplyDelete

Post a Comment

Popular posts from this blog

Struggle to map her own world

Birthday cravings

A rare incident with picture of Vyjayanthimala