ಮನದ ಬಾಗಿಲು

ನಾನು ತ್ರಿವೇಣಿಯವರ “ಮುಚ್ಚಿದ ಬಾಗಿಲು” ಎಂಬ ಕಾಬಂಬರಿಯನ್ನು ಓದುತ್ತಿರುವೆ. ಈ ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿರುವ ಒಬ್ಬ ಮನೊವೈದ್ಯರಬ್ಬರು ಒಂದು ಮಾತನ್ನು ಹೇಳುತ್ತಾರೆ—

“ನಮ್ಮ ಮನದ ಬಾಗಿಲು ಯಾವಾಗಲೂ ಮುಚ್ಚಿರುತ್ತದೆ, ಆದುದರಿಂದ ಹೊರಗಿನವರಿಗೆ ನಾವು ನಯವಾಗಿ, ನಾಗರೀಕರಾಗಿ ಕಾಣುತ್ತೇವೆ. ಮನಸ್ಸಿನಲ್ಲಿ ಅಸಭ್ಯತೆ ಇದ್ದರೂ ನಾಲಿಗೆ ಸಭ್ಯತನದ ಮಾತುಗಳನ್ನಾಡುತ್ತದೆ. ಮುಚ್ಚಿದ ಬಾಗಿಲು ತೆರೆದುಕೊಂಡರೆ? ಆಗ ಮಾನಸ್ಸಿನ ಹುಳುಕು, ಅಸಭ್ಯತನ, ಕೊಳೆ ಹೊರಗಿನವರಿಗೆ ಗೋಚರವಾಗುತ್ತದೆ. ಒಂದು ವಿಧದಲ್ಲಿ ನಮಗಿಂತಲೂ ಮಾನಸಿಕ ರೋಗಿಗಳಿಂದ ನರಳುವವರೇ ನಿಷ್ಕಪಟಿಗಳು. ನಾವು ಎಲ್ಲವನ್ನೂ ಮುಚ್ಚಿಡುತ್ತೇವೆ. ಅವರು ಮನಸ್ಸಿಗೆ ಬಂದುದನ್ನು ಬಾಯಲ್ಲಿ ಆಡಿ ತೋರಿಸಿ “ಹುಚ್ಚರು” ಎಂದೆನಿಸಿಕೊಳ್ಳುತ್ತಾರೆ.”

ನನಗೆ ಈ ಮಾತು ಬಹಳ ನಿಜವೆನಿಸಿತು.

ಮನಸ್ಸಿನ ನೋವುಗಳು ವಿಧವಿಧವಾಗಿರುತ್ತದೆ ಹಾಗೂ ಇವಕ್ಕೆ ಕಾರಣಾಗಳೂ ಅನೇಕ.

  • ಕೆಲವರು ತಮ್ಮ ನೋವನ್ನು ಹತ್ತಿರದವರೊಂದಿಗೆ ಹಂಚಿಕೊಂಡು ಮನ್ನಸ್ಸಿನ ಭಾರವನ್ನು ಕಡಿಮೆಗೊಳಿಸಿಕೊಳ್ಳುತ್ತಾರೆ, ಮನಸ್ಸಿನ ನೋವುಗಳನ್ನೂ ಹಾಗು ಭಾರವನ್ನೂ ಕಡಿಮೆಮಾಡಿಕೊಂಡವರು ಇಂಥಹ ಪರಿಸ್ಥಿತಿಗೆ ಇಳಿಯುವುದು ಬಹಳ ಕಡಿಮೆ. ಮನಸ್ಸಿನ ನೋವನ್ನು ಆಪ್ತರ ಮುಂದಿಟ್ಟಾಗ ಕೆಲವೊಮ್ಮೆ, ಇಂಥ ನೋವಿಗೆ ಪರಿಹಾರವೂ ಸಿಗಬಹುದು.

  • ಇನ್ನು ಕೆಲವರು ಅವರ ಮನಸ್ಸಿನ ನೋವುಗಳನ್ನು ಯಾರಿಗೂ ಹೇಳಿಕೊಳ್ಳದೇ ತಮ್ಮೊಳಗೇ ಅನುಭವಿಸುತ್ತಾರೆ. ನನ್ನ ಪ್ರಕಾರ ಇದು ಬಹಳ ಅಪಾಯಕಾರಿ. ಇದರಿಂದ ಕೆಲವರು depressionಗೂ ಒಳಗಾಗಬಹುದು. ಕೆಲವರಿಗೆ ಮನಸ್ಸು “blackout” ಆಗಬಹುದು. ಎಷ್ಟೇ meditation ಮಾಡಿದರೂ, ದೇಹದ ಆರೋಗ್ಯವು ಚೆನ್ನಾಗಿದ್ದರೂ ಹಾಗೂ ದೇಹವು ಗಟ್ಟಿಮುಟ್ಟಿಯಾಗಿದ್ದರೂ, ಮನಸ್ಸಿನಲ್ಲಿ ನೋವುಗಳಿದ್ದರೆ ಹಾಗೂ ಯೋಚನೆಗಳಿದ್ದರೆ ಎಂಥವರೂ ಮಾನಸಿಕ ದುರ್ಬಲತೆಗೆ ಒಳಗಾಗಬಹುದು.

ನಾವು ಸಾಮಾಜಿಕ ಜೇವಿಗಳಾದ್ದರಿಂದ ನಮ್ಮ ಸುಖ-ದುಃಖಗಳನ್ನು ನಮ್ಮ ಸ್ನೇಹಿತರೋ ಅಥವ ನಮ್ಮ ಹತ್ತಿರದವರೊಂದಿಗೆ ಹಂಚಿಕೊಂಡಾಗ ಇಂಥಹ ಪರಿಸ್ಥಿತಿಗಳನ್ನು ತಡೆಯ ಬಹುದು ಎಂಬುದು ನನ್ನ ಅಭಿಪ್ರಾಯ.

Comments

  1. ಉತ್ತಮ ವಿಚಾರವನ್ನು ಹರಿಯಬಿಟ್ಟಿರಿ ಭಾವನಾ..ಜಗತ್ತಿನ ತು೦ಬೆಲ್ಲ ಬರೀ ಮುಖವಾಡಗಳೇ ಇವೆ. ದ್ವ೦ದ್ವ ಭಾವದ್ದೇ ಸಾಮ್ರಾಜ್ಯ. ನಡೆ-ನುಡಿಯಲ್ಲಿ ಸಾಮರಸ್ಯ ತರುವುದೇ ಜೀವನದ ಪರಮ ಗುರಿಯಾಗಬೇಕು. ಮನಸ್ಸಿನ ನೋವುಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದೀರಿ. ನನಗೆ ಸಹಮತವಿದೆ.

    ಶುಭಾಶಯಗಳು
    ಅನ೦ತ್

    ReplyDelete
  2. ಭಾವನ..
    ನಿಜ ಮನಸ್ಸಿನಲ್ಲಿ ಬಚ್ಚಿಟ್ಟದ್ದು ಕೊಳೆತೂ ಕೊಳೆತೂ ಯಾವುದಾದರೂ ರೂಪದಲ್ಲಿ ಹೊರಹೋಗಲು ಶುರುವಾಗುತ್ತದೆ..
    ಆಗ ಹೊರ ಪ್ರಪ೦ಚಕ್ಕೂ ಒಳಪ್ರಪ೦ಚಕ್ಕೂ ಇರುವ ಲಿ೦ಕ್ ತಪ್ಪಿ ಹೋಗುತ್ತದೆ..
    ಮಾನಸಿಕ ಅಸಮತೋಲನ ಕಾಣಿಸತೊಡಗುತ್ತದೆ. ಹೇಳಿಹಗುರಾಗುವುದೊಳಿತು.

    ReplyDelete
  3. ಅಮೂಲ್ಯವಾದ ಸಾಲುಗಳ ಉತ್ತಮ ಲೇಖನ . ಇಷ್ಟವಾದ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿದ್ದೀರಿ .ನಿಮಗೆ ಧನ್ಯವಾದಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. Dear ChukkiChittara, Seetaram and Baalu, thanks a lots for the encouraging words.. :o))

    ReplyDelete

Post a Comment

Popular posts from this blog

Struggle to map her own world

Birthday cravings

A rare incident with picture of Vyjayanthimala