ಗುಡು ಗುಡಿಯ ಸೇದಿ ನೋಡು
ಪಾಶ್ಚಿಮಾತ್ಯ ದೇಶಗಳಲ್ಲಿ ಯಾರಾದರು ತಮ್ಮನ್ನು ಸಸ್ಯಹಾರಿಗಳೆಂದುಕೊಂಡರೆ , ಅವರು ಹಾಲು ಹಾಗು ಮೊಸರನ್ನು ಮುಟ್ಟುವುದಿಲ್ಲ. ಅವರ ಅಡಿಗೆಗಳಲ್ಲಿ “ ಸೋಯಾ ” ದಂತಹ ಪದಾರ್ಥಗಳನ್ನು ಬಹಳ ಬಳಸುತ್ತಾರೆ ಹಾಗೂ ತಮ್ಮನ್ನು “ vegetarians” ಬದಲಾಗಿ “vegans” ಎಂದು ಕರೆದುಕೊಳ್ಳಲು ಇಚ್ಚಿಸುತ್ತರೆ. ಇಂಥಹ ಜನಗಳ ಪೈಕಿ ಮುಕ್ಕಾಲು ಭಾಗದ ಜನರು “Buddhists” ಗಳು ಇನ್ನು ಕೆಲವರು “ ಹರೇ ರಾಮ ಹರೇ ಕೃಷ್ಣ ” ISKCON ಗುಂಪಿನಲ್ಲಿ “ voluntary” ಕೆಲಸಗಳನ್ನು ಮಾಡುವವರು (ಹೌದು! ಇಲ್ಲೂ ISKCON ಗುಂಪುಗಳಿವೆ). ಕೆಲವೊಮ್ಮೆ Czech Republic ಬೀದಿ ಬೀದಿಗಳಲ್ಲಿ “ ಹರೇ ರಾಮ ಹರೇ ಕೃಷ್ಣ ” ಗುಂಪಿನವರನ್ನು ಕಂಡಿದ್ದೇವೆ. ಈ ಗುಂಪುಗಳು ಭಜನೆಗಳನ್ನು ಹಾಡುತ್ತಿರುತ್ತಾರೆ ಮತ್ತು ಈ ಗುಂಪಿನಲ್ಲಿ ಹಾಡುವವರು ಭಾರತೀಯರೇನಲ್ಲ ಆದ್ರೆ ಇಲ್ಲಿನ ಜನರೇ. ಈ ಪೈಕಿಯ ಜನರು, “tea house” ಎಂಬ ಜಾಗಗಳಲ್ಲಿ ತಮ್ಮ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುತ್ತಾರೆ. ಈ “tea house” ಗಳಲ್ಲಿ “chai” ಗಳು ದೊರೆಯುತ್ತವೆ. ಆದ್ರೆ ಇಲ್ಲಿನ “chai” ನಮ್ಮ ದೇಶದ “chai” ಯಂತಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ “chai” ಎಂದರೆ ಒಂದು ಕಪ್ ಬಿಸಿನೀರಿಗೆ, ಕೈಗೆ ಸಿಕ್ಕ ಗಿಡಮೂಲಿಕೆಗಳನೆಲ್ಲಾ ಹಾಕಿ ಕುದಿಸಿ ಕುಡಿಯುವುದೆಂದು. ಇದು ಅವರಿಗೆ “chai” . ನಮ್ಮಲ್ಲಿ ಮಾಡೊ ಮಸಲಾ chai ಇಲ್ಲಿ ಸಿಗೋದು ಬಹಳ ಅಪರೂಪ. ಇಂಥಹ “tea house” ಗಳಲ್ಲಿ, ಗುಡುಗುಡಿಯನ...