ಅತ್ತೆಗೊಂದು ಕಾಲ ಸೊಸೆಗೊಂದು ಕಾಲ!
Translated from my own blog called " I think I am becoming my mother in law". This was published on Thatskannada.com @ http://thatskannada.oneindia.in/nri/article/2008/1230-walk-the-quarrel-with-my-hubby.html -Thanks to Srivathsa Joshi
This is my first try on translation from english to Kannada.
‘ಟೆಲಿಗ್ರಾಫ್’ ದಿನಪತ್ರಿಕೆ ಓದ್ತಾ ಇದ್ದೆ, ಒಳಪುಟವೊಂದರಲ್ಲಿದ್ದ ತಲೆಬರಹ ಫಕ್ಕನೆ ಗಮನ ಸೆಳೆಯಿತು- I am becoming my mother-in-law! ಒಂದೇ ಉಸಿರಿನಲ್ಲಿ ಓದಿಮುಗಿಸಿದೆ ಅ ಬರಹವನ್ನು. ಹಾಗೇ ಕಣ್ಮುಂದೆ ಬಂದವು ನಾನು ಮದುವೆಯಾದ ಹೊಸತರಲ್ಲಿ ಅತ್ತೆಯ ಮನೆಯಲ್ಲಿ ಕಳೆದ ದಿನಗಳು.
ಮದುವೆಯಾದ ಕೆಲವೇ ದಿನಗಳಲ್ಲಿ ನನ್ನ ಗಂಡ ಕಿರಣ್ ತಾನು ಕೆಲಸ ಮಾಡುವ ಝೆಕ್ ರಿಪಬ್ಲಿಕ್ದೇಶಕ್ಕೆ ಹಿಂದಿರುಗಿ ಆಗಿತ್ತು. ನಾನಿನ್ನೂ ವೀಸಾಗಾಗಿ ಕಾಯುತ್ತ ಬೆಂಗಳೂರಿನಲ್ಲೇ ಉಳಿದಿದ್ದೆ. ಆ ದಿನಗಳಲ್ಲಿ ನನ್ನ ಅತ್ತೆ ಹಾಗೂ ಮಾವನವರ ರೀತಿನೀತಿಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನಾನು ಹುಟ್ಟಿ ಬೆಳೆದಿದ್ದು ಬಹಳ ಸಂಪ್ರದಾಯಸ್ಥ-ಮಡಿವಂತ ಮನೆತನದಲ್ಲಿ. ಆದ್ದರಿಂದಲೇ ಗಂಡನ ಮನೆಯ ಹಾಸ್ಯ ಭರಿತ, ಚೇಷ್ಟೆಯ ಮಾತುಗಳ ವಾತಾವರಣ ನನಗೆ ಬಹಳ ಹೊಸತೆನಿಸಿತ್ತು. ನನ್ನ ಅತ್ತೆಗೆ ಹಾಸ್ಯ, ಲೇವಡಿ ಮಾಡುವ ಸ್ವಭಾವ. ಬಹುಶಃ ಹುಟ್ಟಿನಿಂದಲೇ ಬಂದಿವೆ ಎಂದು ಅನಿಸಿತ್ತು. ಅಂಥವನ್ನು ನೋಡಿ ಅನುಭವಿಸಿ ಅಭ್ಯಾಸವಿಲ್ಲದುದರಿಂದ ಒಂಥರ ರೋಮಂಚನಕಾರಿಯಾಗಿಯೂ ಕಂಡಿತ್ತು.
ಅತ್ತೆ ಮಾವನವರಿಗೆ ದಿನಕ್ಕೊಮ್ಮೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೋಗಿ ಬರುವ ಅಭ್ಯಾಸ. ಹಣ್ಣು ತರಕಾರಿ ತರೋದಕ್ಕೆ ಅಥವಾ ಕೆಲವೊಮ್ಮೆ ಹಾಗೇ ಸುಮ್ಮನೇ ಒಂದು ವಾಕ್ ಮಾಡಿದ ಹಾಗೆ ಆಗುತ್ತದಂತ. ಇಬ್ಬರೂ ಜೊತೆಗೇ ಹೋಗುತ್ತಿದ್ದರು. ಅಲ್ಲಿನ ಅಂಗಡಿಯವರೆಲ್ಲ ಪ್ರತಿದಿನವೂ ಇವರಿಬ್ಬರೂ ಜೊತೆಯಲ್ಲೇ ಬರುವುದನ್ನು ಕಂಡು, “ಜೋಡಿ ಅಂದ್ರೆ ಹೇಗಿರಬೇಕೆಂದು ನಿಮ್ಮಿಬ್ಬರನ್ನು ನೋಡಿ ಕಲಿಯಬೇಕು" ಎಂದು ಹೇಳುತ್ತಿದ್ದರಂತೆ.
ಒಂದು ಸಂಜೆ ನಾವೆಲ್ಲರೂ ಒಟ್ಟಿಗೆ ಮನೆಯಲ್ಲಿ ಎನ್‌ಡಿಟಿವಿ ಚಾನೆಲ್‌ನಲ್ಲಿ ಶೇಖರ್ ಗುಪ್ತಾರವರ Walk the Talk ಕಾರ್ಯಕ್ರಮವನ್ನು ನೋಡುತ್ತಿದ್ದೆವು. ಅದನ್ನು ನೋಡುತ್ತಿದ್ದ ಅತ್ತೆ “ಎಲ್ಲರೂ ನಾನು ಮತ್ತು ನಿನ್ನ ಮಾವನವರು ಒಟ್ಟಿಗೇ ಇರುವುದನ್ನು ನೋಡಿ ಖುಶಿ ಪಡುತ್ತಾರೆ, ಆದರೆ ಅವರಿಗೇನು ಗೊತ್ತು ನಾವು ಮಾಡ್ತಿರೋದು Walk the Talk ಅಲ್ಲ, Walk the Quarreling ಅಂತ?" ಅದನ್ನು ಕೇಳಿದ ನಾನು, ಅವತ್ತು ಮಲಗುವ ತನಕವೂ ನಕ್ಕುನಕ್ಕು ಸುಸ್ತಾಗಿದ್ದೆ!
ಅತ್ತೆ ಕೆಲವೊಮ್ಮೆ ಅವರ ಕುಮಾರಕಂಠೀರವನ ಅಂದರೆ ನನ್ನ ಗಂಡನ ಗುಣಗಾನವನ್ನೂ ಮಾಡುತ್ತಿದ್ದರು. ಹಾಗೇ ಒಮ್ಮೆ “ಕಿರಣ ಕಾಲೇಜ್ ಓದುತ್ತಿದ್ದ ಸಮಯದಲ್ಲಿ, ಬಿಬಿಸಿ ರೇಡಿಯೋ ಹಾಕ್ಕೊಂಡು ದಿನವೂ ಬಿಡದ ಹಾಗೆ ಮಧ್ಯರಾತ್ರಿಯ ತನಕ ನ್ಯೂಸ್ ಕೇಳ್ತಿದ್ದ (ಆ ಕಾಲದಲ್ಲಿ ಐಪಾಡ್, ಎಂಪಿತ್ರೀ ಪ್ಲೇಯರ್ ಎಲ್ಲ ಇರಲಿಲ್ಲವಲ್ಲ). ಅವನ ಈ ಚಟವನ್ನು ನೋಡಿನೋಡಿ, (ಅಲ್ಲ, ಕೇಳಿ ಕೇಳಿ?) ಸಾಕಾಗಿ, ಆ ಹಾಳಾದ ಬಿಬಿಸಿ ರೇಡಿಯೋ ಸ್ಟೇಷನನ್ನು ಯಾರಾದ್ರೂ ಏನಾದ್ರೂ ಮಾಡ್ಬಾರ್ದೆ?! ಇದರಿಂದ ಎಲ್ಲಾರ್ಗೂ ಒಳ್ಳೆ ನಿದ್ದೆನಾದ್ರೂ ಬರಬಹುದು ಎಂದು ಹಿಡಿಶಾಪ ಹಾಕಿದ್ದೆ!" ಎಂದು ನನ್ನಲ್ಲಿ ಹೇಳಿಕೊಂಡಿದ್ದರು.
ನಾನು ಇಲ್ಲಿಗೆ ಅಂದರೆ ಝೆಕ್ ರಿಪಬ್ಲಿಕ್‍ಗೆ ಬಂದ ಮೇಲೆ, ಜಗತ್ತಿನ ಸುದ್ದಿಯನ್ನೆಲ್ಲಾ ತಿಳಿದುಕೊಳ್ಳುವ ಕಿರಣನ ‘ಚಟ’ವನ್ನು ಹತ್ತಿರದಿಂದ ನೋಡುವ ಅವಕಾಶವಾಯಿತು. ಇಲ್ಲಿನ ಟಿವಿಯಲ್ಲಿ ಇಲ್ಲಿನ ಭಾಷೆಯಲ್ಲಿ ಪ್ರತಿ ಭಾನುವಾರ ಬರುವ ‘ರಾಜಕಾರಣಿಗಳೊಂದಿಗೆ ಸಂದರ್ಶನ’ ಕಾರ್ಯಕ್ರಮವನ್ನು ಎರಡು ಗಂಟೆಗಳ ಕಾಲ ನೋಡುತ್ತಾನೆ ನನ್ನ ಕಿರಣ್ ಮಹಾರಾಜ! ಹೌದು, ಕಂಟಿನ್ಯುವಸ್ ಎರಡು ಗಂಟೆ! ಇದನ್ನು ನೋಡಿ ನೋಡಿ ನನಗೆ ಕೆಲವೊಮ್ಮೆ ಸಾಕಾಗಿಹೋಗುತ್ತೆ. ಏಕೆಂದರೆ 1) ನನಗೆ ಇಲ್ಲಿನ ಭಾಷೆ ಅರ್ಥವಾಗೋದಿಲ್ಲ, 2) ನನಗೆ ಬೇಕಾದ ಬೇರೆ ಯಾವ ಕಾರ್ಯಕ್ರಮವನ್ನೂ ಟಿವಿಯಲ್ಲಿ ನೋಡಲು ಆಗೋದಿಲ್ಲ, 3) ಆಗ ಕಿರಣನಿಗೆ ಮನೆಯಲ್ಲಿ ನಾನು ಎಂಬ ಇನ್ನೊಬ್ಬ ಬಡಜೀವಿ ಇದ್ದೇನೆ ಎಂಬ ಪರಿವೆಯೂ ಇರೋದಿಲ್ಲ.
ಒಂದು ಭಾನುವಾರ ಹೀಗೆ ಅವನು ಟಿವಿ ನೋಡುತ್ತಿದ್ದಾಗ, ತೀರಾ ಬೇಜಾರಾಗಿ ಗೊಣಗಲು ಶುರುಮಾಡಿದೆ “ಯಾರಾದ್ರೂ ಆ ಟಿವಿ ಸಂದರ್ಶಕನನ್ನು ಏನಾದ್ರೂ ಮಾಡ್ಬಾರ್ದೆ...?!" ಥೇಟ್ ನಮ್ಮತ್ತೆಯದೇ ಟ್ಯೂನ್, ಅದೇ ಟೋನ್. ನನಗೇ ಗೊತ್ತಿಲ್ಲದಂತೆ ನಾನೂ ಸಹ ನಮ್ಮತ್ತೆ ಆಗಿಬಿಟ್ಟಿದ್ದೆ! Yes, I too am becoming my mother-in-law!
ನನ್ನ ಆ ಹಿಡಿಶಾಪದ ಮಾತುಗಳಿಂದ ಕೂಡಲೆ ನನಗೂ ಕಿರಣ್‌ಗೂ ನಮ್ಮತ್ತೆ ಬಿಬಿಸಿಗೆ ಹಾಕಿದ್ದ ಹಿಡಿಶಾಪದ ನೆನಪಾಗಿ ನಕ್ಕಿದ್ದೇ ನಕ್ಕಿದ್ದು. ಅಲ್ಲಾ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.. ಅಂತ ಗಾದೆನೇ ಇದೆಯಲ್ಲಾ, ಬಹುಶಃ ಅದು ಇದೇ ಕಾಲ!
Cheers :)

Becoming mother-in-law.. ಉತ್ತಮ ತಿಳಿಹಾಸ್ಯ ಬರಹ. ಅಪರೂಪಕ್ಕೆ ಸಿಗುವ ಇ೦ತಹ ತಿಳಿಯಾದ ಹಾಸ್ಯ ಪ್ರಸ೦ಗಗಳು ಮನಕ್ಕೆ ಮುದ ನೀಡುತ್ತವೆ. ಶುಭಾಶಯಗಳು ಭಾವನಾ ಅವರೆ.
ReplyDeleteಅನ೦ತ್
ಧನ್ಯವಾದಗಳು ಅನಂತರಾಜರವರೇ :) ಇದನ್ನ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡಕ್ಕೆ ಎರಡು ದಿನ ಬೇಕಾಯಿತು :(
ReplyDeleteಚೆಂದದ ಪ್ರಸಂಗ.
ReplyDelete