ಜೋಗುಳ!
ಬೆಂಗಳೂರಿನಲ್ಲಿ ಇದ್ದಾಗ, ಬೇಸಿಗೆ, ಚಳಿ, ಮಳೆ, ಯಾವುದೇ ಕಾಲವಾಗಲಿ, ನಮ್ಮ ಮನೆಯ ಫ್ಯಾನು ಜೋರಾಗಿ ಓಡಲೇಬೆಕು. ಫ್ಯಾನು ಜೋರಾಗಿ ಓಡಲಿಲ್ಲವೆಂದರೆ ಮನೆಯಲ್ಲಿ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. “ಅಲ್ ಔಟ್” “ಗುಡ್ ನೈಟ್” ಇವುಗಳ ಮೇಲೆ ನಂಬಿಕೆ ಇರಲಿಲ್ಲ. ಇದರಿಂದಾಗಿ, ಫ್ಯಾನಿನಿಂದ ನಮಗೆ ತಾತ್ಕಾಲಿಕವಾಗಿಯಾದರೂ ಸೊಳ್ಳೆಗಳಿಂದ ಮುಕ್ತಿ. ಈ ಫ್ಯಾನಿನ ಅವಶ್ಯಕತೆ ಏಷ್ಟಂದರೆ, ಅದರ ಶಬ್ಧವಿಲ್ಲದ ಚಳಿಗಾಲದಲ್ಲೂ ನಿದ್ರೆ ಬರುತ್ತಿರಲಿಲ್ಲ.
ನಾನು ಚೆಕ್ ರಿಪಬ್ಲಿಕ್ಗೆ ಬಂದನಂತರ, ಫ್ಯಾನಿನ ಅವಶ್ಯಕತೆ ಕಡಿಮೆಯೇನು ಆಗಲಿಲ್ಲ, ಅದು ಏಕಂದ್ರೆ ನಾನು ಇಲ್ಲಿಗೆ ಬಂದಾಗ ಬೇಸಿಗೆಕಾಲ. ಇದರಿಂದ ಫ್ಯಾನು ನನಗೆ ಮನೆಯಲ್ಲಿ ಇರಲೇಬೇಕು. ನನ್ನ ಪತಿರಾಯನಿಗೆ ಫ್ಯಾನಿನ ಅವಶ್ಯಕತೆ ಇದ್ದರೂ, ನನ್ನಹಾಗೆ ಅವನು addict ಆಗಿರಲಿಲ್ಲ. ಇವನ ಬೆಂಗಳೂರಿನ ಮನೆಯಲ್ಲಿ, ನನ್ನ ಮನೆಯವರಂತೆ ಸದಾಕಾಲ ಫ್ಯಾನು ಹಾಕಿಕೊಳ್ಳುತಿರಲಿಲ್ಲ. ಈ ಫ್ಯಾನಿನ addiction ನನಗೆ ನನ್ನ ತಂದೆಯವರಿಂದ ಶುರುವಾದದ್ದು. ನಾನು ಕೂಡಾ ಅವರ ಹಾಗೆಯೇ ಫ್ಯಾನು ಇಲ್ಲದೆ ನಿದ್ದೆ ಮಾಡುತ್ತಲೇ ಇರಲಿಲ್ಲ. ನಮ್ಮಿಬ್ಬರಿಗೆ ಫ್ಯಾನಿನ ಜೋಗುಳ ಬೇಕೇ ಬೇಕು.
ಸರಿ, ಚೆಕ್ ರಿಪಬ್ಲಿಕ್ಗೆ ಬಂದಮೇಲೆ, ನಾನು ಚಳಿಗಾಲದಲ್ಲಿಯೂ, (ಇಲ್ಲಿನ ಚಳಿಗಾಲಾನೂ, ನಮ್ಮ ದೇಶದ ಚಳಿಗಾಲಾನೂ ಒಂದೆಅಲ್ಲವಲ್ಲ!) ಫ್ಯಾನು ಹಾಕದೆ ಬಿಡುತ್ತಿರಲಿಲ್ಲ. ಪಾಪ ಕಿರಣ! ನನಗೆ ಇದಿಲ್ಲದೆ ನಿದ್ದೆಯೇ ಇಲ್ಲ. ನನ್ನ ಕಿರಣನಿಗೆ(ಪತಿರಾಯ) ನಾನು ಏಕೆ ಹೀಗೆ ಎಂದು ಬಹಳ ಕುತೂಹಲ ಪಾಪ! ನಾನು ಏಕೆ ಸದಾ ಕಾಲ ಹುಚ್ಚು ಹುಚ್ಚಾಗಿ ಫ್ಯಾನು ಹಾಕಿಕೊಂಡಿರುತ್ತೇನೆಂದು ಬಹಳ ಯೋಚನೆ ಮಾಡಿದ್ದಾ ಅಂತ ಕಾಣುತ್ತೆ.
ಒಂದುದಿನ ನನ್ನನ್ನು ಕರೆದು ಹೇಳಿದ, “ಭಾವನಾ, ನೀನು ಪುಷ್ಪಕ ವಿಮಾನ ಫಿಲ್ಮು ನೋಡಿದ್ದೀಯಾ?” ನನಗೆ ಇವ ಈ ಪ್ರಶ್ನೆ ಏಕೆ ಕೇಳುತ್ತಿದ್ದಾನೆ ಎಂದು ಅರ್ಥಾನೇ ಆಗಲಿಲ್ಲ. ನಾನು “ಹೌದು” ಎಂದುತ್ತರಿಸಿದೆ. ಮತ್ತೆ ಕೇಳಿದ “ಆ ಚಿತ್ರದಲ್ಲಿ ಕಮಲಹಾಸನನು ೫ ಸ್ಟಾರ್ ಹೋಟೆಲಲ್ಲಿ ಇದ್ದರೂ, ಅವನಿಗೆ ನಿದ್ರೆ ಬರ್ತಿರಲಿಲ್ಲ. ಆಗ ಅವ ಏನು ಮಾಡಿದಾ ಹೇಳು?” .
ಈ ಚಲನ ಚಿತ್ರವನ್ನು ನೋಡಿ ಬಹಳ ವರ್ಷಗಳಾದ್ದರಿಂದ, ನನಗೆ ಥಟ್ಟನೆ ಉತ್ತರ ಹೊಳೆಯಲಿಲ್ಲ. ಕೆಲನಿಮಿಷಗಳನಂತರ ಕಿರಣ ಈ ಪ್ರಶ್ನೆಯನ್ನು ಏಕೆ ಕೇಳಿದನೆಂದು ಹೊಳೆಯಿತು.
ಕಮಲಹಾಸನನು ೫ ಸ್ಟಾರ್ ಸುಪ್ಪತ್ತಿಗೆಯಲ್ಲಿಯೂ ನಿದ್ದೆ ಬಾರದಿದ್ದಾಗ, ಮಾರನೆಯ ದಿನ, ಅವನ ಹಳೆಯ ವಠಾರಕ್ಕೆ ಹೋಗಿ, ಅಲ್ಲಿನ ಸುತ್ತ ಮುತ್ತಲಿನ ಶಬ್ದವನ್ನು ಟೇಪ್ ರೆಕಾರ್ಡ್ ಮಾಡಿಕೊಂಡು ಅದನ್ನು ೫ ಸ್ಟಾರ್ ಹೋಟೆಲಲ್ಲಿ ಹಾಕಿದ ಮೇಲೆಯೇ ಅವನಿಗೆ ನಿದ್ದೆ ಹತ್ತಿದ್ದು. ಆ ಪಾತ್ರಕ್ಕೆ ಆ ಶಬ್ದಗಳು “ಜೋಜುಳ” ದಂತೆ ಪಾಪ!
ಈ ಚೆಲನ ಚಿತ್ರದ ಘಟನೆ ಜ್ಞಾಪಕ ಬಂದಮೇಲೆ, ಕಿರಣನು ಏನು ಹೇಳಲು ಪ್ರಯತ್ನಿಸುತಿದ್ದ ಏಂದು ನನಗೆ ಹೊಳೆಯಿತು. ನನಗೆ ಆ ಚಿತ್ರದಲ್ಲಿನ ಕಮಲಹಾಸನಿನ ಪಾತ್ರದ ತರಹ ಫ್ಯಾನಿನ ಶಬ್ದ ಬರೇ ಒಂದು ರೀತಿಯ ಅಭ್ಯಾಸ, ಈ ಅಭ್ಯಾಸದಿಂದಾಗಿ ಫ್ಯಾನಿಲ್ಲದೆ ನಿದ್ದಿಯೇ ಬರುತ್ತಿರಲಿಲ್ಲ. ಇದನ್ನು ಅರ್ಥಮಾಡಿಕೊಂಡನಂತರ ಹೇಗೆ ನಕ್ಕಿದ್ದೇನಂದರೆ ಹೇಳಲಾಗುವುದಿಲ್ಲ.
ಈ ಘಟನೆ ಆದಮೇಲೆ, ಸದಾ ಕಾಲಾ ಫ್ಯಾನು ಹಾಕಿಕೊಳ್ಳುವುದು ಇತ್ತೀಚೆಗೆ ಕಡಿಮೆ ಆಗಿದೆ. ಇದರಿಂದ ಕಿರಣನಿಗೆ ಸ್ವಲ್ಪ ಸಮಾಧಾನವಾದಂತೆ ತೋರುತ್ತೆದೆ... :)

ಜೋಗುಳದ ನಿರೂಪಣೆ ಸೊಗಸಾಗಿದೆ ಭಾವನಾ..ಫ್ಯಾನಿನ ಗಾಳಿಗಿ೦ತ ಅದರ ಶಬ್ದಕ್ಕೆ addict ಆಗಿರುವವರಿದ್ದಾರೆ. ಅದಿಲ್ಲದೆ ನಿದ್ದೆ ಬರುವುದಿಲ್ಲ ಎನ್ನುತ್ತಾರೆ. ಪುಷ್ಪಕ ವಿಮಾನ ನೆನಪಿಸಿದ್ದೀರಿ..!
ReplyDeleteಶುಭಾಶಯಗಳು
ಅನ೦ತ್
ಧನ್ಯವಾದಗಳು ಅನಂತರಾಜ್ ರವರೆ.. :)
ReplyDeleteಭಾವನಾ,
ReplyDeleteನೀವು ಕನ್ನಡದಲ್ಲಿ ಬರೆಯುತ್ತಿರುವುದು ತಿಳಿದು ಖುಷಿಯಾಯಿತು. ನಿಮ್ಮ ಬರಹದ ಶೈಲಿ ಚೆನ್ನಾಗಿದೆ, ಘಟನೆ ಕೂಡ. ಹೀಗೆ ಬರೆಯುತ್ತಿರಿ, ನಿಮ್ಮ ಕನ್ನಡ ಪ್ರೀತಿಗೆನಮೋನ್ನಮಃ
ಜೋಗುಳದ ನಿರೂಪಣೆ ಸೂಪರ್
ReplyDeleteತುಂಬಾ ಇಷ್ಟ ಆಯಿತು ಬರಹ
ಹೀಗೆ ಬರೆಯುತ್ತಿರಿ
ಬರುತ್ತಿರುವೆ
ಎಲ್ಲರಿಗೂ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರಋಣಿ! :) ನನ್ನ ಪ್ರಯತ್ನ ಮಾಡುವೆ ಇದೆ ರೀತಿಯಲ್ಲಿ ಬರಿಯಲು. ನಾನು ಬಹುಸಂಕ್ಯೆಯಲ್ಲಿ ಬರಿಯೋದಿಲ್ಲ. ನನ್ನ ಇಂಗ್ಲಿಷ್ ಪೋಸ್ತ್ಗಾನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ :)
ReplyDeleteBhavana,
ReplyDeletebarita iri
ಭಾವನಾ ಅವರೇ, ಬಲು ತಮಾಷೆಯಾಗಿ ಬರೆದಿದ್ದೀರಿ. ಲಲಿತ ಪ್ರಬಂಧವಾಗುವ ಎಲ್ಲಾ ಲಕ್ಷಣಗಳೂ ಇಲ್ಲಿವೆ. ಕಮಲಹಾಸನ್ ಮತ್ತು ಪುಷ್ಪಕವಿಮಾನ ಮರೆಯಲಾರದ ಚಿತ್ರಗಳು.
ReplyDeleteನನ್ನ ಬ್ಲಾಗಿಗೂ ಒಮ್ಮೆ ಬನ್ನಿ
ಧನ್ಯವಾದಗಳು ಭದ್ರಿನಾಥ್, ನಾನು ಕನ್ನಡದಲ್ಲಿ ಬರೆದು ಬಹಳು ವರ್ಷಗಳಾಯಿತು. ಅದ್ದರಿಂದ, ನನ್ನ highschool ಟೈಮ್ನಲ್ಲಿ ಪ್ರಬಂಧ ಬರೆಯೋ ರೀತಿಯಲ್ಲಿ ಬರಿಯಬೇಕೆಂದು ನಿರ್ಧರಿಸಿ ಇದನ್ನ ಬರ್ದೇ. ೨೦ ನಿಮಿಷಗಳಲ್ಲಿ ಇದನ್ನು ಬರೆದು, edit ಮಡಿ ಮುಗಿಸಿದ್ದೆ... ಲಿಲಿತ ಪ್ರಬಂಧದಂತಿದೆ ಎಂದು ನಿಮ್ಮಿಂದ ಕೇಳಿ ಖುಷಿಯಾಯಿತು :)
ReplyDeleteಹ..ಹ..ಹ ಚೆನ್ನಾಗಿದೆ ಭಾವನ. ನನ್ನ ಮಗಳು ಮತ್ತು ಪತಿ ಇಬ್ಬರಿಗೂ ಈ ಫ್ಯಾನ್ ಜೋಗುಳ ಬೇಕೇ ಬೇಕು. ಎಂತಹ ಚಳಿಗಾಲದಲ್ಲು ಫ್ಯಾನ್ ಹಾಕಿಕೊಂಡು ಎರಡು ರಗ್ ಹೊದ್ದು ಮಲಗಿಬಿಡುತ್ತಾರೆ.
ReplyDeleteಭಾವನ ಅವರೆ;ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ.ಪರಾಂಜಪೆಯವರ ಬ್ಲಾಗಿನಲ್ಲಿ ನಿಮ್ಮ ಅಡ್ರೆಸ್ ಸಿಕ್ಕಿತು.ನಿಮ್ಮ ಬರವಣಿಗೆ ಇಷ್ಟ ಆಯ್ತು.ನಾನೂ ಫ್ಯಾನ್ ಅಡಿಕ್ಟ್ ಪಾರ್ಟಿ.ಎಂತಹ ಚಳಿಯಲ್ಲೂ ಫ್ಯಾನ್ ಇರಲೇ ಬೇಕು. ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.
ReplyDeleteಸುಮರವರಿಗೂ, ಕೃಷ್ಣ ಮೂರ್ತಿ ಯವರಿಗೂ ನನ್ನ ಬ್ಲಾಗಿಗೆ ಭೇಟಿ ಮಾಡಿದಕ್ಕೆ ಧನ್ಯವಾದಗಳು. ನಿಮ್ಮಿಬ್ಬರ ಬ್ಲಾಗಿಗೆ ಭೇಟಿ ಮಾಡುವೆ ಸಧ್ಯದಲ್ಲೇ..
ReplyDeleteಇಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು..
ಕಿರಣರ ಚಾಣಾಕ್ಯ ಐಡಿಯಾ ಚೆನ್ನಾಗಿ ಕೆಲಸ ಮಾಡಿದೆ.
ReplyDelete:)
ReplyDelete