ನಾಡು ಬಿಟ್ಟವಳ ಕನ್ನಡ ದಾಹ..
"ಬಾರಿಸು ಕನ್ನಡ ಡಿಂಡಿಮವಾ, ಓ ಕರ್ನಾಟಕ ಹೃದಯ ಶಿವ"
"ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗು ನೀ ಕನ್ನಡವಾಗಿರೂ"
ಮೇಲಿನ ಎರಡು ಹಾಡುಗಳನ್ನು ಕೇಳಿದಗಲೆಲ್ಲಾ, ಎಂಥವರಿಗಾದರೂ ಕನ್ನಡತನದ ಕಿಚ್ಚು ಉಕ್ಕಿ ಹರಿಯುವುದು. ನನ್ನಂಥವರ ಪರಿಸ್ಥಿತಿ ಹೇಗೆಂದರೆ ಭಾರತದಾಚೆಗೆ ಬಂದಮೇಲೆ ನಮ್ಮ ನಾಡಿನ ಇತಿಹಾಸ, ಭಾಷೆ, ಸಂಸ್ಕೃತಿಗಳ ಮೇಲಿನ ಅರಿವು, ಪ್ರೀತಿ ಹೆಚ್ಚುತ್ತದೆ. ಕನ್ನಡಿಗರಾದ ನಮಗೆ ಕನ್ನಡ ಸಾಹಿತ್ಯದ, ಇತಿಹಾಸದ ಪರಿಚಯ ಎಷ್ಟರ ಮಟ್ಟಿಗೆ ಇದೆ? ಈ ಮಾತುಗಳು ನನ್ನ ಮತ್ತು ನನ್ನ ತಂದೆತಾಯಿಯವರ ಪೀಳಿಗೆಗೆ ಸೀಮಿತವೆನಿಸುತ್ತದೆ. ಕನ್ನಡ ಸಾಹಿತ್ಯವನ್ನು ಎಷ್ಟು ಜನರು ಓದುವರು? ಅದು ಹಾಗೆ ಇರಲಿ ಕನ್ನದ ಏಳು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ನಮ್ಮಲ್ಲಿ ಎಷ್ಟು ಜನರಿಗೆ ಹೆಮ್ಮೆಯ ಸಂಗತಿ?
ನಾನು ಬೆಂಗಳೂರಿನಲ್ಲಿ ಇದ್ದಾಗ ಎಲ್ಲಿ ನೋಡಿದರೂ ಅವಕಾಶವಿದ್ದರೂ ಸಮಯವಿಲ್ಲವೆಂದು, ಅವರವರ ಕೆಲಸ ಕಾರ್ಯಗಳಲ್ಲೇ ಮುಳುಗಿಹೋಗಿದ್ದ ಜನರೇ ಹೆಚ್ಚು. ಇದರಲ್ಲಿ ಹೊಸತೇನಿದೆ ಎಂದು ನಿಮಗನಿಸಬಹುದು - ನಿಜ ಇದರಲ್ಲಿ ಹೊಸತು ಏನೂ ಇಲ್ಲ, ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ಈ ಮಂದಿಯ ಪೈಕಿ ಎಷ್ಟು ಜನ ಇಂಗ್ಲಿಷ್ ಸಾಹಿತ್ಯ ಓದುವರು? ಅದನ್ನು ಓದುವುದಕ್ಕೆ ವ್ಯವಧಾನ ಎಲ್ಲಿಂದ ಬಂತು?
ನಾನು ಆಗಾಗ ಕನ್ನಡ ಸಣ್ಣ ಕಥೆಗಳನ್ನು, ಕಾದಂಬರಿಗಳನ್ನು ಓದುತ್ತಿದ್ದೆ. ಪ್ರೌಡಶಾಲೆಯಲ್ಲಿ ಪ್ರಥಮ ಭಾಷೆಯಗಿ ಕನ್ನಡವ್ಶನ್ನು ಆರಿಸಿಕೊಂಡಿದ್ದೆ. ಆಂಗ್ಲ ಮಾಧ್ಯಮದ ಶಿಕ್ಷಣದ ದೆಸೆಯಿಂದ, ಇಂದಿಗೂ ಕನ್ನಡಲ್ಲಿ ಬರೆಯುವುದು ಕಠಿಣವೆನಿಸುವುದು. ಯೋಚಿಸಿ ಯೋಚಿಸಿ ಬರೆಯಬೇಕು. ಅಭ್ಯಾಸ ತಪ್ಪಿಹೋದುದರಿಂದ ಸರಿಯಾಗಿ ಬರೆಯುವುದಕ್ಕೆ ಬಾರದೆ ಸ್ವಲ್ಪ ಸಂಕೋಚವೆನಿಸಿ ಕನ್ನಡದಲ್ಲಿನ ಸಣ್ಣ ಕಥೆಗಳನ್ನು, ಕಾದಂಬರಿಗಳನ್ನು ಹೆಚ್ಚಾಗಿ ಓದಲು ಪುನಃ ಆರಂಭಿಸಿದೆ. ಈಗ ಬ್ಲಾಗೊಂದನ್ನು ಬರೆಯಲು ಶುರುಮಾಡಿರುವೆ.
ಸಣ್ಣ ಕಥೆಗಳನ್ನು, ಕಾದಂಬರಿಗಳನ್ನು ಓದಲು ಮೂಲಭೂತ ಕನ್ನಡದ ಶಿಕ್ಷಣ ಸಾಕು. ಇದಕ್ಕೆ ನನ್ನೊಬ್ಬಳ ಉದಾಹರಣೆಯೇ ಸಾಕು. ಕಿರಣನ್ನು ಮದುವೆಯಾದಮೇಲೆ, ಕನ್ನಡ ಸಹಿತ್ಯದ ಮೇಲಿನ ಉತ್ಸಾಹ ಹೆಚ್ಚಿತು. ಜೊತೆಗೆ ಅವನ ಪ್ರೋತ್ಸಾಹ ಬೇರೆ. ಅವರ ಮನೆಯವರು ಸುಮಾರು ಓದುತ್ತಿದ್ದರು. ಅವರ ಮನೆಯಲ್ಲಿದ್ದ ಕನ್ನಡ ಪುಸ್ತಕಗಳ ರಾಶಿ ನೋಡಿ ನನಗೆ ಉತ್ಸಾಹ ಮತ್ತೆ ಭುಗಿಲೆದ್ದಿತು.
ಕಿರಣನು ಬಿಡುವಿನ ಸಮಯದಲ್ಲಿ ಹಲವಾರು ಬಾರಿ ಭಾಷಾಂತರ ಮಾಡಿದ್ದಾನೆ. ಇಲ್ಲಿ ಚೆಕ್ ರಿಪಬ್ಲಿಕ್‍ನಲ್ಲಿ ಕೂಡ ಇಂಟರ್‍ನೆಟ್ ಮೂಲಕ ಪುಸ್ತಕಗಳನ್ನು ಖರೀದಿಸುತ್ತಿದ್ದೇವೆ. ಈ ಉತ್ಸಾಹ ಕಿರಣನಿಗೆ ಎಲ್ಲಿಂದ ಬಂತು ಎಂದು ಅವನಿಗೆ ಕೇಳಿದಾಗ, ಅವನು ತನ್ನ ಪ್ರೌಢಶಾಲೆಯಿಂದಲೂ ಬೆಳೆಸಿಕೊಂಡು ಬಂದಿರುವ ಓದುವ ಅಭ್ಯಾಸವೆಂದ. ಅದರ ಜೊತೆಗೆ, ಅವನ ಮನೆಯಲ್ಲೂ ಉತ್ಸಾಹ ದೊರಕುತಿತ್ತು ಅವನಿಗೆ.
ಈಗಿನ ಬಿಡುವಿಲ್ಲದ ಜೀವನದ ನಡುವೆ ಹೇಗೆ ಕನ್ನಡ ಪುಸ್ತಕಗಳನ್ನು ಓದುವುದು? ವಾರಕೊಮ್ಮೆ ಒಂದು ಸಣ್ಣ ಕಥೆ, ಅಥವಾ ಕಾದಂಬರಿ ಓದುವುದಕ್ಕೆ ಶುರುಮಾಡಿಕೊಂಡರೆ ಸಾಕು. ಒಮ್ಮೆ ಶುರುವಾದ ಮೇಲೆ ಓದುವ ಆಸೆ ತಾನಗಿಯೇ ಮತ್ತೆ ಮತ್ತೆ ಪುಸ್ತಕದೆಡೆಗೆ ನಮ್ಮನ್ನು ಎಳೆಯುತ್ತದೆ. ಇದಕ್ಕೂ ನನ್ನ ಉದಾಹರಣೆಯೆ ಸಾಕು. ನಾವು ಶುರುಮಾಡಿದರೆ, ನಮ್ಮ ಮಕ್ಕಳಿಗೆ ಇದರ ಅಭ್ಯಸ ಸಾಧಾರಣವಾಗಿಯೇ ಹಚ್ಚಿಕೊಳ್ಳುವುದು.
ವೈಚಾರಿಕ ವಾಚಕರ ಮನನಕ್ಕೆ ಸಾಕಷ್ಟು ಸೊಪ್ಪು ಹಾಕಿದ್ದೇನೆಂದುಕೊಂಡು ಈ ಮಾತುಗಳನ್ನು ಸಧ್ಯಕ್ಕೆ ನಿಲ್ಲಿಸುತ್ತೇನೆ ...
:o)
ಭಾವನ..

ನಿಮ್ಮ ಈ ಭಾಷಾ ಅಭಿಮಾನಕ್ಕೆ ಸ೦ತಸವಾಗುತ್ತದೆ ಭಾವನ..ನಿಮಗೂ ಮತ್ತು ನಿಮ್ಮವರು ಕಿರಣ್ ಅವರಿಗೂ ಅಭಿನ೦ದನೆಗಳು. ಕನ್ನಡದ ಬಗ್ಗೆ ಒಳ್ಳೆಯ ಮಾತುಗಳು ಎಲ್ಲಿ೦ದ ಕೇಳಿಬ೦ದರೂ ಮನ ಮುದಗೊಳ್ಳುತ್ತದೆ..ಹೀಗೇ ಬರಿಯುತ್ತಿರಿ..ಕನ್ನಡವನ್ನು ಶ್ರೀಮ೦ತಗೊಳಿಸುತ್ತಿರಿ.
ReplyDeleteಶುಭಾಶಯಗಳು
ಅನ೦ತ್
ನಿಮ್ಮ ಭಾಷಭಿಮಾನಕ್ಕೂ ಅದಕ್ಕೆ ಪ್ರೇರೇಪಣೆಯಾದ ಜೆಕ್ ರಿಪಬ್ಲಿಕ್ ಜೀವನಕ್ಕೂ ಒಂದು ಸಲಾಂ!
ReplyDeletedhanyavAdagaLu Seetaram..
ReplyDelete