ಬಾಳೆಯ ನೆರಳು
ನಾನು high schoolನಲ್ಲಿ ಓದುತ್ತಿದ್ದ ಸಮಯದಲ್ಲಿ ನನಗೆ ಶಾಲೆಯ syllabus ಆಚೆಯ ಕವನ-ಕಾದಂಬರಿಗಳನ್ನು ಓದಲು ಶುರುಮಾಡಬೇಕೆಂಬ ಇಚ್ಚೆ ಶುರುವಾಗಿತ್ತು. ನನ್ನ ತಾಯಿಯು ಕನ್ನಡದವರಲ್ಲದಿದರೂ, ಕನ್ನಡದಲ್ಲಿನ ಕಾದಂಬರಿಗಳನ್ನು ಓದುತ್ತಿದ್ದರು. ಮೊದಲಿನಿಂದಲೂ ನನ್ನ ತಾಯಿಯು ಮಾಡಿದ್ದೇ ಸರಿಯೆಂಬ ನಂಬಿಕೆ ನನ್ನದು. ನಾನು ಒಟ್ಟಾರೆ ಇಲ್ಲಿನವರೆಗೆ ಸುಮಾರು ೧೦ ಕನ್ನಡದ ಕಾದಂಬರಿಗಳನ್ನು ಓದಿದ್ದರೆ ಹೆಚ್ಚು. ಇದರಿಂದಾಗಿ ಇತ್ತಿಚೆಗೆ online ಮೂಲಕ ಬಹಳ ಮನಮೆಚ್ಚಿದ ಕವನ-ಕಾದಂಬರಿಗಳನ್ನೂ ಖರೀದಿಸುತ್ತಿದ್ದೇವೆ. ಮುಂಚೆ ಓದದಿದ್ದರೇನಾಯಿತು, ಈಗಿಂದ ಶುರುಮಾಡೋಣವೆಂಬ ಬಯಕೆ.
ನಾನು ಓದಿದ ಮೊದಲನೆಯ ಕಾದಂಬರಿ ನನ್ನನ್ನು feminism, individualism ಎತ್ತ ನೇರವಾಗಿ ತಿರುಗಿಸಿತು. ಆ ಕಾದಂಬರಿಯೇ “ಬಾಳೆಯ ನೆರಳು”. ಈ ಕಾದಂಬರಿಯಲ್ಲಿ ವಾಣಿಯವರು ಸಾಮಾಜಿಕ ವ್ಯವಸ್ತೆಯ ಬಗ್ಗೆ ಬಹಳ ನೇರವಾಗಿಯೇ ಬರೆದಿದ್ದಾರೆ.
ವಸಂತಳ ವಿವಾಹಿತ ಬದುಕನ್ನೂ, ಮದುವೆಯಾದ ಕೆಲವು ದಿನಗಳಲ್ಲೇ ಗಂಡನು ಪರಾರಿಯಾದ ಸಂಕಟವನ್ನೂ, ಅವನಿಂದ ಪಡೆದ ಮಗುವು, ಮುಂಬೈಯಲ್ಲಿನ ಅಣ್ಣನ ಮನೆಯಲ್ಲಿದ್ದರೂ ಪರರ ಮನೆಯಲ್ಲಿ ಇದ್ದಹಾಗಿನ ವಸಂತಳ ಅನುಭವಗಳು.
ಈ ಕಾಬಂಬರಿಯಲ್ಲಿ ಮುಖ್ಯ ಪಾತ್ರವಾದ ವಸಂತಳ ಬದುಕಿನಲ್ಲಿ ನಡೆದ ಘಟನೆಗಳೆಲ್ಲವೂ ನನ್ನ ಹದಿಹರೆಯದ ಮನಸ್ಸಿಗೆ ಬಹಳ ಗಟ್ಟಿಯಾಗಿಯೇ ತಾಕಿತು.
ತಮ್ಮ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳದಿದ್ದರೆ, ಬೇರೆಯವರ ಸಲಹೆಗಳು (ಕೆಲವೊಮ್ಮೆ ತಂದೆ-ತಾಯೆಂದಿರ ಸಲಹೆಗಳೂ ಇರಬಹುದು) ಹೇಗೆ ಬಾಳೆಯ ನೆರಳಿನಂತೆ ಎಂದು ಬಹಳ ಸೂಕ್ಷ್ಮವಾಗಿ ವಾಣಿಯವರು ತಮ್ಮ ಕಾದಂಬರಿಯಲ್ಲಿ ಬರೆದಿದ್ದಾರೆ..
ನಾನು ಓದಿದ ಮೊದಲನೆಯ ಕಾದಂಬರಿ ನನ್ನನ್ನು feminism, individualism ಎತ್ತ ನೇರವಾಗಿ ತಿರುಗಿಸಿತು. ಆ ಕಾದಂಬರಿಯೇ “ಬಾಳೆಯ ನೆರಳು”. ಈ ಕಾದಂಬರಿಯಲ್ಲಿ ವಾಣಿಯವರು ಸಾಮಾಜಿಕ ವ್ಯವಸ್ತೆಯ ಬಗ್ಗೆ ಬಹಳ ನೇರವಾಗಿಯೇ ಬರೆದಿದ್ದಾರೆ.
ವಸಂತಳ ವಿವಾಹಿತ ಬದುಕನ್ನೂ, ಮದುವೆಯಾದ ಕೆಲವು ದಿನಗಳಲ್ಲೇ ಗಂಡನು ಪರಾರಿಯಾದ ಸಂಕಟವನ್ನೂ, ಅವನಿಂದ ಪಡೆದ ಮಗುವು, ಮುಂಬೈಯಲ್ಲಿನ ಅಣ್ಣನ ಮನೆಯಲ್ಲಿದ್ದರೂ ಪರರ ಮನೆಯಲ್ಲಿ ಇದ್ದಹಾಗಿನ ವಸಂತಳ ಅನುಭವಗಳು.
ಈ ಕಾಬಂಬರಿಯಲ್ಲಿ ಮುಖ್ಯ ಪಾತ್ರವಾದ ವಸಂತಳ ಬದುಕಿನಲ್ಲಿ ನಡೆದ ಘಟನೆಗಳೆಲ್ಲವೂ ನನ್ನ ಹದಿಹರೆಯದ ಮನಸ್ಸಿಗೆ ಬಹಳ ಗಟ್ಟಿಯಾಗಿಯೇ ತಾಕಿತು.
ತಮ್ಮ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳದಿದ್ದರೆ, ಬೇರೆಯವರ ಸಲಹೆಗಳು (ಕೆಲವೊಮ್ಮೆ ತಂದೆ-ತಾಯೆಂದಿರ ಸಲಹೆಗಳೂ ಇರಬಹುದು) ಹೇಗೆ ಬಾಳೆಯ ನೆರಳಿನಂತೆ ಎಂದು ಬಹಳ ಸೂಕ್ಷ್ಮವಾಗಿ ವಾಣಿಯವರು ತಮ್ಮ ಕಾದಂಬರಿಯಲ್ಲಿ ಬರೆದಿದ್ದಾರೆ..
ಕನ್ನಡದ ಅತ್ಯುತ್ತಮ ಬರಹಗಾರ್ತಿ ನೇಮಿಚಂದ್ರರ 'ಸಮಗ್ರ ಕತೆಗಳು'ಮತ್ತು ಅವರ 'ಬದುಕು ಬದಲಿಸ ಬಹುದು' ಎನ್ನುವ ಕೃತಿಗಳನ್ನು ಓದಿ.ಅವರ ಸಮಗ್ರ ಕತೆಗಳಲ್ಲಿ ಇರುವ ಸ್ತ್ರೀಪರ ಕಳಕಳಿ,ಸ್ತ್ರೀ ಪರ ಧೋರಣೆಗಳು ತುಂಬಾ ಪಾಸಿಟಿವ್ ಆಗಿವೆ.ಸಮಾಜದ ಏಳ್ಗೆಗೆ ಸಹಕಾರಿಯಾಗುವಂತಿವೆ.ತಪ್ಪದೆ ಓದಿ.ನಮಸ್ಕಾರ.
ReplyDeleteತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುತ್ತೇನೆಂದು ಹೊರಟರೂ ಕೆಲವೊಮ್ಮ
ReplyDeleteಅನುಭವದ ಕೊರತೆಯಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆಯಲ್ಲವೇ.. ಇಂಡಿವಿಡ್ಯುವಲಿಸಂ ತತ್ವ ಕೆಲವೊಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಯಾಗಿ ಎತ್ತಿ ಹಿಡಿಯುವದಿಲ್ಲವೇ. ವ್ಯಕ್ತಿಯೊಬ್ಬ ಸತತವಾಗಿ ತಪ್ಪು ನಿರ್ಧಾರಗಳನ್ನು ಕೈಗೊಂಡರೆ ಅವುಗಳನ್ನು ತಿದ್ದುವ ಚಿಕ್ಕ ಹೊಣೆಗಾರಿಕೆ ತಂದೆ ತಾಯಿಗಳು, ಸಮಾಜಕ್ಕೆ ಇಲ್ಲವೇ.
”ಬಾಳೆಯ ನೆರಳು”ಓದಿಲ್ಲ. ಈ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDeleteಭಾವನಾರವರೆ....
ReplyDeleteಕನ್ನಡದಲ್ಲಿ ನನಗೆ "ತ್ರಿವೇಣಿಯವರ" ಕಾದಂಬರಿಗಳೆಂದರೆ ಅಚ್ಚುಮೆಚ್ಚು...
ಇನ್ನು ಸುನಂದಾ ಕಡಮೆ, ಎಂ.ಕೆ.ಇಂದಿರಾ, ಅನುಪಮಾ ನಿರಂಜನ್ ಇವರೆಲ್ಲ ಇಷ್ಟವಾಗುತ್ತಾರೆ..
ಬಾಳೆಯ ನೆರಳು ಓದಿಲ್ಲ..
ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..
ನೀವು ಕನ್ನಡದಲ್ಲಿ ಬರೆದದ್ದು ನೋಡಿ ಖುಷಿಯಾಯಿತು..
ನಿಮ್ಮ ಕನ್ನಡ ಚೆನ್ನಾಗಿದೆ...
@ Krishnamurthyಅವರೆ, ನೇಮಿಚನಂದ್ರರ “ನೇಮಿಚನಂದ್ರರ ಕಥೆಗಳು” ಇದನ್ನು ಓದಿದ್ದೇನೆ. ಅವರ ಸಮಗ್ರ ಕಥೆಗಳೆಂದರೆ ಇದೇನ? 'ಬದುಕು ಬದಲಿಸ ಬಹುದು' ಇದನ್ನು ಓದಿಲ್ಲ. ಧನ್ಯವಾದಗಳು ಇದನ್ನು ತಿಳಿಸಿಕೊಟ್ಟಿದ್ದಕ್ಕೆ.
ReplyDelete@ ಮಹೇಶವರೆ, ನಿಜ ದೊಡ್ಡವರ ಹಾಗು ತಂದೆ-ತಾಯೆಂದಿರ ಸಲಹೆಗಳು ಬಹಳ ಮುಖ್ಯ. Individualism ಒಂದು ಬಹಳ ದೊಡ್ಡ ವಿಷಯ. ಮಕ್ಕಳು ಬೆಳೆಯುವ ಸಮಯದಲ್ಲಿ, ತಂದೆ-ತಾಯೆಂದಿರ ಸಲಹೆಗಳು ಬಹಳ ಮುಖ್ಯ, ಅದರಲ್ಲೂ ಮಕ್ಕಳಿಗೆ ಚೈತನ್ಯ ತರುವಂಥ ಸಲಹೆಗಳಿದ್ದರೆ, ಇನ್ನು ಒಳೇಯದು. ಆದ್ರೆ ಮಕ್ಕಳು, ಅದರಲ್ಲು ಹೆಣ್ಣು ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡದೆ, ಗೊತ್ತಿಲ್ಲದ ಅಬ್ಬೆಪಾರಿಗೆ ಕೊಟ್ಟು ಅವಳ ಜೇವನ ಹಾಳು ಮಾದುವಂಥ ತಂದೆ-ತಾಯೆಂದಿರ ಸಲಹೆಗಳು ಒಲಿತೇ? ಈ ಕಾದಂಬರಿಯಲ್ಲಿ ವಸಂತಳ ಪಾಡಿನ ಬಗ್ಗೆ ಓದಿದ ಮೇಲೆ, ಇಂಥ ತಂದೆ-ತಾಯೆಂದಿರ ಸಲಹೆಗಳು ಎಷ್ಟು ಹೆಣ್ಣುಮಗಳಿಗೆ ಒಳ್ಳೇಯದು?
ReplyDeleteಅವಳ ಕಷ್ಟದ ಸಮಯದಲ್ಲಿ ಅವಳ ತಂದೆಯಾಗಲಿ, ತಾಯಿಯಾಗಲಿ ಅಥವ ಸಮಾಜವೇ ಆಗಲಿ ಸಹಾಯ ಮಾಡಿತೆ?
ಇದು ಬರೀ ಕಥೆಯಲ್ಲ, ನಮ್ಮ ಸಾಮಾಜಿಕ ವ್ಯವಸ್ತೆಯ ಒಂದು ನೋಟ. ಅದು ಹಳೆ ಕಾಲದ ಮಾತೆ? ಈಗಿನ ಕಾಲದಲ್ಲಿ, ಕೆಲವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು, ಮದುವೆಯ ಸಮಯದಲ್ಲಿ, ತಮ್ಮ ಬೀಗರಾಗುವವರು ತಮ್ಮ ಸೊಸೆ ಕೆಲಸ ಮಾಡ್ಬಾರದೆಂದರೆ, ಅದಕ್ಕೆ ಒಪ್ಪೋ ತಂದೆ-ತಾಯೆಂದಿರನ್ನೂ ನೇಡಿದ್ದೇನೆ. ಈ ಹುಟ್ಟಿಗೆ ಅಷ್ಟೆಲ್ಲ ವಿದ್ಯಾಭ್ಯಾಸ ಏಕೆ ಕೊಡಬೇಕು?
ನಾನು ಆಂಗ್ಲ ಭಾಷ್ಯಲ್ಲಿ ಬರೆದ http://bhavana-pen.blogspot.com/2009/08/place-for-individuality.html ಓದಿ, ನಿಮ್ಮ ಅಭಿಪ್ರಯ ತಿಳಿಸಿ.
ಧನ್ಯವಾದಗಳು.
@ಚುಕ್ಕಿಚಿತ್ತಾರ, ನಿಮಗೂ ಧನ್ಯವಾದಗಳು…
ReplyDelete@ಪ್ರಕಶವರೆ, ನನ್ನ blogಗಿಗೆ ಸ್ವಾಗತ.. ನನಗೂ ತ್ರಿವೇಣಿಯರ ಕಾದಂಬರಿಗಳು ಬಹಳ ಅಚ್ಚುಮೆಚ್ಚು, ಅದರಲ್ಲೂ "ಹಣ್ಣಲೇ ಚಿಗುರಿದಾಗ".ಅವರ "ಮುಚ್ಚಿದ ಬಾಗಿಲ" ಚೆನ್ನಾಗಿದೆ. "ಬಾಳೆಯ ನೆರಳು"ಓದಿದ ಸಮಯದಲ್ಲೇ, ಎಂ ಕೆ ಇಂದಿರರವರ “ಫಿಣಿಯಮ್ಮ” ಓದಿದ್ದೆ, ಅದನ್ನು ಇನ್ನೊಮ್ಮೆ ಓದಬೇಕು, ನನಗೆ ಉಶ ನವರತ್ನರಾಮ್ ಅವರ “ಹೊಂಬಿಸಿಲು” ಬಹಳ ಅಚ್ಚುಮೆಚ್ಚು.
ವಾಣಿಯವರದು ಇಲ್ಲಿನವರೆಗು ಇದೊಂದೆ(ಬಾಳೆಯ ನೆರಳು) ಕಾದಂಬರಿ ಓದಿರುವುದು. ವಾಣಿಯವರು ನನ್ನ ತಾಯಿಗೆ ಅಚ್ಚುಮೆಚ್ಚು.
ಧನ್ಯವಾದಗಳು..:)
ಸ್ತ್ರೀ ಪರ ಕಾಳಜಿಯ ನಿಮ್ಮ ಚಿ೦ತನೆಗಳು ಆಸಕ್ತಿಕರವಾಗಿವೆ.ಅಭಿನ೦ದನೆಗಳು.
ReplyDeleteಮು೦ದುವರೆಸಿ. ನನ್ನ ಬ್ಲಾಗ್ ಗೊಮ್ಮೆ ಭೇಟಿಕೊಡಿ.
ಪ್ರಭಾಮಣಿಯವರೆ ನನ್ನ blogಗೆ ಸ್ವಾಗತ.. ಧನ್ಯವಾದಗಳು.. :o )
ReplyDeleteನಿಮ್ಮ blogiಗೆ ಸದ್ಯದಲ್ಲೇ ಭೇಟಿನೀಡುವೆ..
ಬಾಳೆಯ ನೆರಳು ಓದಿಲ್ಲ! ಇನ್ನು ತಮ್ಮ ಅನಿಸಿಕೆಯಿಂದ ಓದಬೇಕೆನಿಸಿದೆ.
ReplyDeletedhanyavAdagaLu Seetaram :)
ReplyDeleteಭಾವನ ಆವರೆ,
ReplyDeleteನಿಮ್ಮ ಬರವಣಿಗೆ ಹೀಗೆ ಸಾಗಲಿ..ಕನ್ನಡದ ಕಂಪನ್ನು ವಿದೇಶದಲ್ಲೂ ಹರಡುತ್ತಿರುವ ನಿಮಗೆ ಶುಭವಾಗಲಿ
-ಜ್ಞಾನೇಶ್ವರ (Jnaneshwara)
http://jnaneshwara.blogspot.com/
ಧನ್ಯವಾದಗಳು ಜ್ನನೆಶ್ವರವರೆ, ನನ್ನ blogಗೆ ಸ್ವಾಗತ ..
ReplyDelete