ಎಲ್ಲಿರುವೇ….

ರಮ್ಯ ಚೈತ್ರ ಕಾಲ???

ವಸಂತ-ಚೈತ್ರ ಮಾಸದ ಬಗ್ಗೆ ಎಂಥೆಂತ ಕವನಗಳಿವೆ, ಚಿತ್ರಗೀತೆಗಳೂ ಇವೆ. ನಮ್ಮಲ್ಲಿನ (ಭಾರತ ದೇಶದಲ್ಲಿ) ಚಳಿಗಾಲವು Europeನಲ್ಲಿನ ಚಳಿಗಾಲದಂತಲ್ಲದಿದ್ದರೂ, ಚಳಿಗಾಲವು ಮುಗಿದು ವಸಂತ ಋತು ಶುರುವಾಗೋ ಸಮಯವು ಬಹಳ ರಮಣೀಯವಾಗಿರುತ್ತದೆ ಎಂಬ ಮಾತಿದೆ.


ಬೆಂಗಳೂರಿನಲ್ಲಿ ೮೦-೯೦ರ ದಶಕದಲ್ಲಿ ಹುಟ್ಟಿ-ಬೆಳೆದ ನಾನು ಈ ಮಾತು ಎಷ್ಟು ನಿಜವೆಂದು ಬಹಳ ಯೋಚಿಸಿದ್ದುಂಟು.
೧೯೫೦-೧೯೭೦ರ ಕನ್ನಡ ಚಲನ ಚಿತ್ರಗಳಲ್ಲಿ ವಸಂತ ಋತುವಿನ ಬಗ್ಗೆ ಹಾಡಿದ್ದೂ ಹಾಡಿದ್ದೆ. ನಿಜ ಅಂದಿನ ಕಾಲದಲ್ಲಿ ವಸಂತ ಋತುವು ಬಹಳ ರಮಣೀಯವಾಗಿತ್ತೋ ಏನೋ. ಆದರೆ ನಮ್ಮ ಕಾಲದಲ್ಲಿನ ಮಕ್ಕಳಿಗೆ ಇದರ ಕಂಪನ್ನು ಅನುಭವಿಸುವ ಅವಕಾಶವೇ ಸಿಗಲಿಲ್ಲ. ಪಾಪ!
ಮಲೆನಾಡಿನಲ್ಲಿ ಈ ರಮಣೀಯತೆ ಇನ್ನು ಇಂದಿಗೂ ಉಳಿದಿದೆ ಎಂದರೆ ತಪ್ಪಾಗದು.
ಹೋದ್ವರ್ಶ ಬೆಂಗಳೂರಿಗೆ ಭೇಟೆನೀಡಿದ್ದಾಗ, ಕೊಡಗಿನ ಸೊಬಗನ್ನು ಒಮ್ಮೆ ಆಸ್ವಾಧಿಸಬೇಕೆಂದು ನಿಶ್ಚಯಿಸಿದೆವು. ಅಲ್ಲಿನ ಸುಂಟಿಕೊಪ್ಪದಲ್ಲಿ ಒಂದು guest houseನಲ್ಲಿ ಉಳಿದುಕೊಂಡಿದ್ದೆವು. ಈ ಜಾಗದ ಸುತ್ತಲೂ coffee estateಗಳು, ಬಹಳ ರಮಣೀವವಾಗಿತ್ತು.
ಆದ್ರೆ Europeನಲ್ಲಿ ವಸಂತ ಕಾಲವೆಂದರೆ ಹಬ್ಬದ ಮೆರವಣಿಗೆಯೇ ಶುರುವಾಗುತ್ತದೆ. ಇಲ್ಲಿ Easter ಎಂಬ ಹೆಸರಿನಲ್ಲಿ ಚಳಿಗಾಲದ ಅಂತ್ಯವನ್ನು ಹಾಗು ವಸಂತಮಾಸದ ಆರಂಭವನ್ನು ಬಹಳ ಅದ್ಧೂರಿಯಿಂದ ಆಚಿರಿಸುತ್ತಾರೆ. ಇಲ್ಲಿನ ಜನರಿಗೆ ಚಿಳಿಗಾಲದಲ್ಲಿ ಸೊರಗಿ ಸೊರಗಿ ವರ್ಷದ ಹೊಸ ಋತುವಿಗಾಗಿ ಕಾಯುವುದೇ ಒಂದು ದೊಡ್ಡ ಕೆಲಸ. ಪಾಪ! ನಾನು ಈ ಸಾಹಸವನ್ನು ೪ ವರ್ಷಗಳಿಂದ ಮಾಡಿದ್ದೇನೆ.

ಆಂಗ್ಲ-ಭಾಶೆಯಲ್ಲಿ ಒಂದು ಮಾತಿದೆ ಅದೇನೆಂದರೆ “If we had no winter, the spring would not be so pleasant; if we did not sometimes taste of adversity, prosperity would not be so welcome” ಈ ಮಾತು ಎಷ್ಟು ನಿಜ!
Europeನಲ್ಲಿನ ವಸಂತಮಾಸವು ನಮ್ಮಲಿನ ವಸಂತ ಮಾಸದಂತಲ್ಲ. ಇಲ್ಲಿ ಕೋಗಿಲೆಯ ಕುಹು ಕುಹು ಕೇಳುವುದಿಲ್ಲ, ಬದಲಿಗೆ ಚಿಳಿಗಾಲದಲ್ಲಿ ಒಣಗಿದ ಮರಗಳಲ್ಲಿ ಹಸಿರು ಚಿಗುರನ್ನು ಕಾಣಬಹುದು, ಇದು ಬಹಳ ರಮ್ಯಮಯ ದೃಶ್ಯ. ಹಕ್ಕಿಗಳ ಇಂಚರವು ಎಲ್ಲೆಡೆಯೂ ಕೇಳಬಹುದು. ಹಿಮವು ಕರಗಿ ನೀರಾಗುತ್ತದೆ.

ವಸಂತದ ಋತುವಿನ ಬಗ್ಗೆ ಈ ಚಿಳಿಗಾಲದಲ್ಲೇಕೆ ಬರೆದೆನೆಂದರೆ, ನನಗೆ ಈ ಚಿಳಿಗಾಲ ಈಗಲೆ ಸಾಕಾಗಿ ಹೋಗಿದೆ. ಅದಲ್ಲದೆ ಈ ವರ್ಶದ ಚಿಳಿಗಾಲವು ಬಹಳ ಕಠೋರವಾಗಿರುತ್ತದೆಂದು ಹವಾಮಾನ ವರದಿಯು ಸೂಚಿಸುತ್ತದೆ, ದುರಾದೃಷ್ಟವಶ ಇದು ನಿಜವಾಗುತ್ತಿರೋಹಾಗಿದೆ ಎಂದು ಹೇಳುತ್ತಾ ನನ್ನ ಈ ಬರಹವನ್ನು ಇಲ್ಲಿಗೆ ಅಂತ್ಯಗೊಳಿಸುತ್ತಿದ್ದೇನೆ.

.... ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ......

....ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ, ಇದು ರಮ್ಯ ಚೈತ್ರ ಕಾಲಾ...

Comments

  1. ಮೇಡಂ,
    ಮುದನೀಡುವ ಲೇಖನ...
    ನೀವೇನೋ ವಸಂತನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರ. ನಾವೂ ಬಹಳ ಚಳಿಯನ್ನು ಈ ಬಾರಿ ಅನುಭವಿಸಿದೆವು. ಆದರೆ ಆ ಚುಮು ಚುಮು ಚಳಿಯಲ್ಲಿ ಮುಂಜಾವು ಪಾರ್ಕಿನ ತುಂಬಾ ನಡೆಯುವುದಿದೆಯಲ್ಲಾ ಅದರ ಅನುಭವವೇ ಮುದನೀಡುತ್ತದೆ. ಶೂಟಿಂಗ್ ಜಾಗಗಳಲ್ಲಿ ರಾತ್ರಿಗಳಲ್ಲಿ ಕ್ಯಾಂಪ್ ಫೈರ್ ಮಾಡಿಕೊಂಡು ಕೂರುವ ಮಜವೇ ಬೇರೆ. ಬೇಸಿಗೆಯಲ್ಲಿ ಏನಿದೆ ಭಾವನಾ ಅವರೇ ಬರೀ ಬೆವರೇ. ಗಾಡಿಯದ್ದೂ ನಮ್ದೂ ರೇಡಿಯೇಟರ್ ಬಾಯಿಲ್ ಅಷ್ಟೇ! ಈ ಬಾರಿಯ ಬೇಸಿಗೆ ನೆನೆಸಿಕೊಂಡರೆ ಈಗಲೇ ಮೈ ಪೂರ ಬೆವರು. ನಮ್ಮ ರಸ್ತೆಗಳೋ, ಮುಗಿಯದ ಮೆಟ್ರೋ ಕಾಮಗಾರಿಯೋ... ಭಗವಂತನೇ ನಮ್ಮನ್ನು ಕಾಪಾಡಬೇಕು.

    ReplyDelete
  2. Badrinath, ಇಲ್ಲಿನ ಚಳಿಗಾಲ ಅಂದ್ರೆ -10 degrees ಇರುತ್ತೆ. ಕೆಲವೊಮ್ಮೆ ನೆಲ freeze ಆಗಿಹೋಗುತ್ತೆ. ನಡೆಯೋಕ್ಕೆ ಬಹಳ ಕಷ್ತ.. ಇಲ್ಲಿನ ಚೈತ್ರ ಮಾಸ ಅಂದ್ರೆ ಬೆಂಗಳೂರಿನ ಚಳಿಗಾಲದ ತರಹ. ಇಲ್ಲಿ ಚೈತ್ರ ಮಾಸದಲ್ಲಿ 15 degrees ಇರುತ್ತೆ..

    ReplyDelete

Post a Comment

Popular posts from this blog

Struggle to map her own world

Birthday cravings

Teenage Heartache? Or was it?? Part 2