ಮೂಕಜ್ಜಿಯ ಕನಸ್ಸಿನ್ನತ್ತ ಒಂದು ನೋಟ
ಮೂಕಜ್ಜಿಯು ತನ್ನ ಮೊಮ್ಮಗನಿಗೆ-
“ದೇವರು ಎಂಬುದು ನಾವು ನಂಬಿದರೆ ಉಂಟು. ನಂಬಿದ್ದಾರೆ ಜನೆ. ಈ ಮರವನ್ನು ( ಹಳ್ಳಿಯ ಅಶ್ವತ್ಥದ ಕಟ್ಟೆ) ನೆಟ್ಟವರೂ ನಂಬಿದವರೇ. ಈ ಮರಕ್ಕೆ ನನ್ನ ಅಮ್ಮ ನನ್ನನ್ನು ಕರೆದುಕೊಂಡು ಹೀಗೆಯೇ ಸುತ್ತು ಬಂದವಳು. ನಾನೂ ಬಂದದ್ದನ್ನು ಕಂಡೆಯಲ್ಲ! ಅಮ್ಮ ಅದರ ಹತ್ತಿರ ನಿತ್ಯವೂ ಏನೇನೋ ಬೇಡುತ್ತಿದ್ದ ನೆನಪು ನನಗೆ. ನನಗೆ ಬುದ್ಧಿಬರುವ ಮೊದಲು ನಾನೂ ಬೇಡಿರಬೇಕು. “ಗಂಡನನ್ನು ಕೊಡು” ಎಂದು ಬೇಡಿರಲಿಕ್ಕೂ ಸಾಕು. ಒಂದು ದಿನ ಅವನೇ ಕೊಟ್ಟ ಎಂತ ತಿಳಿದಿರಲೂ ಬಹುದು. ಅನಂತರ ಆಯಿತಲ್ಲ. ಅವನೇ ಕೊಂಡ- ಎಂದು ತಿಳಿದುಕೊಂಡೆ ನಾಲ್ಕು ದಿನ. ಮತ್ತೆ ಇದೆಲ ಮರಳು- ಎನಿಸಿತು. ನಂಬಿಕೆಯೂ ಒಂದು ಮರುಳೇ. ಈಗ ಸುತ್ತು ಬಂದರೆ ಅದು ಅಭ್ಯಾಸದಿಂದ. ಇಲ್ಲ, ಬರಿದೆ ಮನಸಿಗೆ ಹಿತ ಕಾಣಿಸುತ್ತದೆ- ಎಂಬುದರಿಂದ ಬರುತ್ತೇನೆ. ಇಲ್ಲಿ ಕುಳಿತರೆ ಹಿಂದಿನ ನೂರಾರು ತಲೆಮಾರಿನ ಸೆರಗು ನಾನು ಎನಿಸುತ್ತದೆ. ಹಿಂದೆ ಹೋದಷ್ಟೂ ಜನಗಳು, ಜೀವಗಳು ಇದ್ದ ಹಾಗೆ ಕಾಣಿಸುತ್ತದೆ. ಮತ್ತೂ ಹಿಂದಕ್ಕೆ ಯೋಚಿಸಿದರೆ, ಅದು ಇತ್ತೋ ಇಲ್ಲವೋ ಎನಿಸುತ್ತದೆ. ಹಾಗೆ ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದರೆ. ಅವನೇನು ಮಾಡುತ್ತಿದ್ದಾನೋ? ಯಾರು ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರು ಯಾರು ನಂಬುವುದಿಲ್ಲ- ಎಂದು ಹುಡುಕಿ ಹೋಗಲಾರ. ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ. ಅವನನ್ನು ತಿಳಿಯ ಬೇಕಾದರೆ, ನಾವು ಅವನನ್ನು ಹುಡುಕಿದ ಹಾಗೆ, ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ. ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ, ನಾವೆ ಅದಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಯಾರು ಹೇಳುವವರಿದ್ದಾರೆ? ನಮಗೆ ಇಷ್ಟಕಂಡಂತೆ ನಡೆದಾಗ- “ದೇವರ ಇಚ್ಛೆ” ಅನ್ನುತ್ತೇವೆ. ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ.”
-ಶಿವರಾಮ ಕಾರಂತ
ನಿಮ್ಮ ಅನಿಸಿಕೆ???
ನಾವು ಕಲ್ಪಿಸಿಕೊಂದಂತೆ ನಮ್ಮ ದೇವರು!ಯದ್ಭಾವಂ ತದ್ಭವತಿ!ಧನ್ಯವಾದಗಳು.
ReplyDeleteಭಾವನಾ ನಮಸ್ತೆ..
ReplyDeleteಕಾರ೦ತರು ಮೂಕಜ್ಜಿಯ ಮೂಲಕ ತಮ್ಮ ಅನಿಸಿಕೆಯನ್ನು ಕಾಣಿಸಿದ್ದಾರೆ -"ಸುತ್ತು ಬಂದರೆ ಅದು ಅಭ್ಯಾಸದಿಂದ. ಇಲ್ಲ, ಬರಿದೆ ಮನಸಿಗೆ ಹಿತ ಕಾಣಿಸುತ್ತದೆ- ಎಂಬುದರಿಂದ ಬರುತ್ತೇನೆ. ಇಲ್ಲಿ ಕುಳಿತರೆ ಹಿಂದಿನ ನೂರಾರು ತಲೆಮಾರಿನ ಸೆರಗು ನಾನು ಎನಿಸುತ್ತದೆ. ಹಿಂದೆ ಹೋದಷ್ಟೂ ಜನಗಳು, ಜೀವಗಳು ಇದ್ದ ಹಾಗೆ ಕಾಣಿಸುತ್ತದೆ".(ಅಜ್ಜಿಯ ಕನಸುಗಳನ್ನು ನಾನು ಓದಿಲ್ಲ)
"ಮನಸಿಗೆ ಹಿತ ಕಾಣಿಸುತ್ತದೆ" ಎ೦ಬ ವಿಚಾರವನ್ನು ತೆಗೆದುಕೊಳ್ಳೋಣ - ಮನೆಯಲ್ಲಿ TV ಯಲ್ಲಿ ಬರುವ ಕೆಲವೊಮ್ಮೆ ಕರ್ಕಶ(ನನಗೆ) ಹಾಡುಗಳು, ಕುಣಿತ, ಶಬ್ದ - ಮನಸ್ಸಿಗೆ ತು೦ಬಾ ಹಿ೦ಸೆಯಾಗುತ್ತದೆ ಎ೦ದುಕೊ೦ಡಾಗ, ಮನೆಯ ಹೊರ ತೋಟದಲ್ಲಿರುವ ಗಿಡ, ಮರಗಳ ನಡುವಿನಲ್ಲಿ ಸಿಗುವ ಅಹ್ಲಾದಕರವಾದ ವಾತಾವರಣ, ದೂರದ ಗುಡಿಯಲ್ಲಿ ಕುಳಿತರೆ ದೊರೆಯುವ ಮನಶ್ಯಾ೦ತಿ "ನನ್ನ ಮನಸ್ಸಿಗೂ ಹಿತ ಕಾಣಿಸುತ್ತದೆ". ಸ್ವಲ್ಪ ಮು೦ದುವರೆಸಿದರೆ, ಅಲ್ಲಿ ಹೊಮ್ಮುವ ಧನಾತ್ಮಕ ಅ೦ಶಗಳು, ನನ್ನ ಮನದಲ್ಲಿಯೂ ಅದೇ ತರ೦ಗಗಳನ್ನು ಅರಳಿಸುತ್ತದೆ, (ಇದು ಸ್ವಾನುಭವ) ಮತ್ತು ಯಾವ ವಿಕಾರ ಭಾವಗಳಾಗಲೀ, ಋಣಾತ್ಮಕ ತರ೦ಗಗಳಾಗಲೀ ನನ್ನನ್ನು ಬಾಧಿಸುವುದಿಲ್ಲ. ಇದನ್ನು ನಾನು divinity ಎ೦ದು ನ೦ಬುತ್ತೇನೆ. ಇನ್ನು - “ದೇವರ ಇಚ್ಛೆ”, ಅನಿಷ್ಟ ಪ್ರಾಪ್ತಿ - ಇವುಗಳ ಬಗ್ಗೆ ನನ್ನ ಅನಿಸಿಕೆ ಏನೂ ಇರುವುದಿಲ್ಲ. ಇದನ್ನು prove ಮಾಡಿ ಎ೦ದರೆ, ಅದಕ್ಕೆ ಆಧಾರಗಳು ಸಿಕ್ಕುವುದಿಲ್ಲ. ಅದು ನ೦ಬಿಕೆಯ ಪ್ರಶ್ನೆ ಅಷ್ಟೆ. ಕಾರ೦ತರ ವಿಚಾರಗಳಲ್ಲೂ ಅದೇ ಭಾವವನ್ನು ನಾನು ಗುರುತಿಸಿದೆ. ಅಲ್ಲಿ ಯಾವುದೂ commitment ಕಾಣಿಸಲಿಲ್ಲ. ತಮ್ಮ ಅನಿಸಿಕೆಗಳನ್ನು ಮಾತ್ರ ದಾಖಲಿಸಿದ್ದಾರೆ ಎ೦ದು ಅನಿಸಿತು.
ಕಾಮೆ೦ಟ್ ನ volume ಜಾಸ್ತಿ ಆಯಿತೇನೋ.. :)
ಶುಭಾಶಯಗಳು
ಅನ೦ತ್
@ ಕೃಷ್ಣಮೂರ್ತಿ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.
ReplyDelete@ ಅನಂತ್, ನಿಮ್ಮ ಅಭಿಪ್ರಾಯವನ್ನು ಕೇಳಿ volume ಜಸ್ತಯಾಗಿದೆ ಎಂದು ಹೇಳುವ ಅಧಿಕಾರ ನನಗಿಲ್ಲ. ನಿಮ್ಮ ಅಭಿಪ್ರಾಯ ನೀವು ತಿಳಿಸಿದ್ದೀರ. ನನಗೆ ಇದು ಯೂಚಿಸುವಂಥಹ ವಿಚಾರವೆನಿಸಿ ಇಲ್ಲಿ share ಮಾಡಿರುವೆ. ನಾನು ಶಿವರಾಂ ಕಾರಂತ್ ಹೇಳುವುದನ್ನು ಒಪ್ಪುತ್ತೇನೆ. ನನಗೆ ದೀವರೆಂಬುದು ಮನುಷ್ಯನೇ ಸ್ರುಷ್ಟಿಸ್ಸಿರುವುದೆಂದು ನಂಬಿಕೆ. :)
ReplyDelete